sdg-banner

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲೊಂದಾದ ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 193 ಸದಸ್ಯ ರಾಷ್ಟ್ರಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಜಾರಿಗೊಳಿಸುತ್ತಿವೆ. ಭಾರತ ದೇಶದಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ. ರಾಜ್ಯದಲ್ಲಿ ಯೋಜನಾ ಇಲಾಖೆಯು ಸುಸ್ಥಿರ ಅಭಿವೃದ್ಧಿ ಗುರಿಗಳ ಸಮನ್ವಯ ಮತ್ತು ಮೇಲ್ವಿಚಾರಣೆಯ ಹೊಣೆ ನಿರ್ವಹಿಸುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಮಾರ್ಗದರ್ಶನ, ನೀತಿ, ವಿನ್ಯಾಸ, ವಿಮರ್ಷೆ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಆಡಳಿತ ತರಬೇತಿ ಸಂಸ್ಥೆಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರವನ್ನು ಯೋಜನಾ ಇಲಾಖೆಯ ಆರ್ಥಿಕ ನೆರವಿನಡಿಯಲ್ಲಿ 2019-20ನೇ ಸಾಲಿನಲ್ಲಿ ಪ್ರಾರಂಭಿಸಲಾಯಿತು. ಕೇಂದ್ರವನ್ನು ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕರಾದ
ಶ್ರೀ ಕಪಿಲ್ ಮೋಹನ್ ಭಾ.ಆ.ಸೇ. ರವರು ಆಗಸ್ಟ 15, 2019 ರಂದು ಉದ್ಘಾಟಿಸಿದರು. ಈ ಕೇಂದ್ರವು ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕರ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಆಡಳಿತ ತರಬೇತಿ ಸಂಸ್ಥೆಯು ಕರ್ನಾಟಕ ಸರ್ಕಾರದ ಪ್ರಧಾನ ತರಬೇತಿ ಸಂಸ್ಥೆಯಾಗಿರುವುದರಿಂದ ಸುಸ್ಥಿರ ಅಭಿವೃದ್ಧಿ ಗುರಿಗಳ ತರಬೇತಿ ನೀಡುವ ಪ್ರಮುಖ ಹೊಣೆಯನ್ನು ಈ ಸಂಸ್ಥೆಗೆ ವಹಿಸಲಾಗಿದೆ. . ರಾಜ್ಯ ಸರ್ಕಾರದ ಬೇರೆ ಬೇರೆ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳು, ಸೂಚಕಗಳು, ಮೇಲ್ವಿಚಾರಣಾ ಕಾರ್ಯತಂತ್ರಗಳು, ಕಾರ್ಯಕ್ರಮದ ದೌರ್ಬಲ್ಯಗಳನ್ನು ಗುರುತಿಸಲು ಬೇಕಿರುವ ಕೌಶಲ್ಯಗಳನ್ನು ನೀಡುವುದು ಹಾಗೂ ಜಾಗತಿಕ ಗುರಿಗಳನ್ನು ಸಾಧಿಸಲು ಸಹಾಯಕವಾಗುವ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು ಬೇಕಿರುವ ಕೌಶಲ್ಯಗಳನ್ನು ನೀಡುವುದೇ ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

ಕೇಂದ್ರದ ಪ್ರಗತಿ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮಾಡಲು ಹಾಗೂ ಕೇಂದ್ರದ ಉತ್ತಮ ಕಾರ್ಯನಿರ್ವಹಣೆಗೆ ಅವಶ್ಯವಿರುವ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನೀಡಲು ಸಲಹಾ ಸಮಿತಿಯೊಂದನ್ನು ರಚಿಸಲಾಗಿದೆ. ಯೊಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಇತರೆ ಸದಸ್ಯರು, ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಕ್ತರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ, ಆಯುಕ್ತರು ಸಾರ್ವಜನಿಕ ಸೂಚನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶಕರು, ಜಂಟಿ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು ಮತ್ತು ಬೋಧಕರು, ಸುಸ್ಥಿರ ಅಭಿವೃದ್ಧಿ ಗುರಿಗಳು – ಕರ್ನಾಟಕ ಕೇಂದ್ರ.

ದೃಷ್ಠಿ:

ಯೋಜನೆಗಳನ್ನು ರೂಪಿಸುವುದು, ಸಾಮಥ್ರ್ಯಗಳನ್ನು ವೃದ್ಧಿಪಡಿಸುವುದು, ಪ್ರಗತಿಯ ಮೌಲ್ಯಮಾಪನ ಮಾಡುವುದು, ಸಂಶೋಧನೆಯನ್ನು ಕೈಗೊಳ್ಳುವುದು ಮತ್ತು ನೀತಿ ನಿರೂಪಕರಿಗೆ ಪ್ರತಿಕ್ರಿಯೆಯನ್ನು ಕಳುಹಿಸಲು ರಾಜ್ಯ ಮಟ್ಟದ ಚಿಂತನಾ ಕೇಂದ್ರವಾಗಿ ಹೊರಹೊಮ್ಮುವುದು.

ಉದ್ದೇಶಗಳು:

  • ಸುಸ್ಥಿರ ಅಭಿವೃದ್ಧಿ ಗುರಿಗಳ ವಿಷಯದ ಓದುವ ಸಾಮಾಗ್ರಿಗಳನ್ನು ತಯಾರಿಸಲು ಕಾರ್ಯಗಾರವನ್ನು ಹಮ್ಮಿಕೊಳ್ಳುವುದು.
  • ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ತರಬೇತುದಾರರನ್ನು ತಯಾರು ಮಾಡುವುದು.
  • ಕ್ರಿಯಾ ಸಂಶೋಧನೆ ಮತ್ತು ಏಕಕಾಲೀನ ಮೌಲ್ಯಮಾಪನ ಕೈಗೊಳ್ಳುವುದು.
  • ಕಾರ್ಯಕ್ರಮಗಳ ಅತ್ಯತ್ತಮ ಅನುಷ್ಠಾನದ ಉದಾಹರಣೆಗಳ ಪ್ರಕರಣಗಳನ್ನು ದಾಖಲಿಸಿ ಇತರೆ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದು.
  • ಪ್ರಗತಿಯ ಅಧಾರದ ಮೇಲೆ ಮಾದರಿ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳನ್ನು ಗುರುತಿಸಿ ವರ್ಗೀಕರಿಸುವುದು.
  • ಆನ್‍ಲೈನ್ ಕಲಿಕೆಗೆ ಸಾಮಾಗ್ರಿ ತಯಾರಿಸಿ ಶಿಕ್ಷಣಾರ್ಥಿಗಳನ್ನು ಪ್ರೋತ್ಸಾಹಿಸುವುದು.
  • ಉತ್ತಮ ಕಾರ್ಯಕರ್ತರನ್ನು ಗುರುತಿಸಿ ಉತ್ತೇಜಿಸುವುದು.
  • ಇತರೆ ಸರ್ಕಾರಿ ಸಂಸ್ಥೆಗಳು/ಸರ್ಕಾರೇತರ ಸಂಸ್ಥೆಗಳು/ಅಂತರ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕ ಹಾಗೂ ಪಾಲುದಾರಿಕೆ ಏರ್ಪಡಿಸುವುದು.

ಪೂರ್ಣಗೊಂಡಿರುವ ಕಾರ್ಯಕ್ರಮಗಳು:

  1. ದಿನಾಂಕ:18-20 ನವೆಂಬರ್ 2019 ರಲ್ಲಿ ಓದುವ ಸಾಮಾಗ್ರಿಯನ್ನು ಸಿದ್ದಪಡಿಸಲು 03 ದಿನಗಳ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
  2. ದಿನಾಂಕ: 17-20 ಡಿಸೆಂಬರ್ 2012 ರಲ್ಲಿ ತರಬೇತುದಾರ ತರಬೇತಿಯನ್ನು ಏರ್ಪಡಿಸಲಾಗಿತ್ತು.
  3. ಸುಸ್ಥಿರ ಅಭಿವೃದ್ಧಿ ಗುರಿಗಳ ವಿಷಯದಲ್ಲಿ ಮೂಕ್ ಕೋರ್ಸ್‍ಗೆ (Massive Open Online Course) ಅವಶ್ಯವಿರುವ ಮಾರ್ಗಸೂಚಿ ಮತ್ತು ಪಠ್ಯಕ್ರಮಗಳನ್ನು ತಯಾರಿಸಿ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಸಲ್ಲಿಸಲಾಗಿದೆ.

2019-20ನೇ ಸಾಲಿನ್ಲಲಿ ಮುಂದೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು:

  1. ಕಲಬುರ್ಗಿ ವಿಬಾಗದ 06 ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಜನವರಿ-2020 ರ ಮಾಹೆಯಲ್ಲಿ ಹಮ್ಮಿಕೊಳ್ಳಲಾಗಿದೆ.
  2. ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಸರ್ಕಾರಿ ಇಲಾಖೆಗಳನ್ನು ಒಗ್ಗೂಡಿಸುವ ವಿಷಯಗಳ ಚರ್ಚೆಗೆ ರಾಷ್ಟ್ರ ಮಟ್ಟದ ಕಾರ್ಯಗಾರ.
  3. ಉತ್ತಮ ಅಭ್ಯಾಸಗಳನ್ನು ಅಂತರಾಷ್ಟ್ರೀಯ ಕಾರ್ಯಗಾರದಲ್ಲಿ ಹಂಚಿಕೊಳ್ಳುವುದು.

ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಿದೆ

null

ಎ ಎಂ ರಾಜಶೇಖರ

ಪದನಾಮ:
ಬೋಧಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಆರ್ಥಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ, ಬೆಂಗಳೂರುವಿಶ್ವ ವಿದ್ಯಾನಿಲಯ
ಮೇಲ್ವಿಚಾರಣೆ, ಮೌಲ್ಯಮಾಪನ, ಜಾಹೀರಾತು ಮತ್ತು ಪ್ರಚಾರ
ಸಾಮಥ್ರ್ಯವೃದ್ಧಿ, ಯೋಜನೆಗಳ ಪ್ರಸ್ತಾವನೆ ತಯಾರಿಕೆ ಮತ್ತು ಮೌಲ್ಯಮಾಪನ ವರದಿಗಳನ್ನು ತಯಾರಿಸುವುದು.

ಸಂಪರ್ಕ:
9868283847
ಇ-ಮೇಲ್: amratisdg@gmail.com

null

ರಾಜೇಶ್ ಕೆ

ಪದನಾಮ:
ತರಬೇತಿ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಕಾಂ, ಬಿ.ಬಿ.ಎಂ

ಸಂಪರ್ಕ:
7676960157 / 9844574519
ಇ-ಮೇಲ್: rajeshsiud@gmail.com

null

ವಿನಯ್ ಕುಮಾರ್ ಕೆ

ಪದನಾಮ:
ತರಬೇತಿ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಬಿ.ಎಸ್.ಸಿ

ಸಂಪರ್ಕ:
9986763236
ಇ-ಮೇಲ್: vinayraj88k@gmail.com

null

ಮಧು ಎನ್.

ಪದನಾಮ:
ಮಲ್ಟಿ ಟಾಸ್ಕಿಂಗ್ ಸಹಾಯಕರು
null

ಅಲಿಕ ಸುಲ್ತಾನ

ಪದನಾಮ:
ಮಲ್ಟಿ ಟಾಸ್ಕಿಂಗ್ ಸಹಾಯಕರು
+ ಪರಿಚಯ

+ ದೃಷ್ಟಿಕೋನ & ಉದ್ದೇಶಗಳು

+ ಕ್ರಿಯಾ ಯೋಜನೆ 2019-20

+ ಸಂಶೋಧನೆ ಮತ್ತು ದಾಖಲಿಕರಣ

ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಿದೆ

+ ಬೋಧಕರು/ಸಿಬ್ಬಂಧಿ ವರ್ಗ
null

ಎ ಎಂ ರಾಜಶೇಖರ

ಪದನಾಮ:
ಬೋಧಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಆರ್ಥಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ, ಬೆಂಗಳೂರುವಿಶ್ವ ವಿದ್ಯಾನಿಲಯ
ಮೇಲ್ವಿಚಾರಣೆ, ಮೌಲ್ಯಮಾಪನ, ಜಾಹೀರಾತು ಮತ್ತು ಪ್ರಚಾರ
ಸಾಮಥ್ರ್ಯವೃದ್ಧಿ, ಯೋಜನೆಗಳ ಪ್ರಸ್ತಾವನೆ ತಯಾರಿಕೆ ಮತ್ತು ಮೌಲ್ಯಮಾಪನ ವರದಿಗಳನ್ನು ತಯಾರಿಸುವುದು.

ಸಂಪರ್ಕ:
9868283847
ಇ-ಮೇಲ್: amratisdg@gmail.com

null

ರಾಜೇಶ್ ಕೆ

ಪದನಾಮ:
ತರಬೇತಿ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಕಾಂ, ಬಿ.ಬಿ.ಎಂ

ಸಂಪರ್ಕ:
7676960157 / 9844574519
ಇ-ಮೇಲ್: rajeshsiud@gmail.com

null

ವಿನಯ್ ಕುಮಾರ್ ಕೆ

ಪದನಾಮ:
ತರಬೇತಿ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಬಿ.ಎಸ್.ಸಿ

ಸಂಪರ್ಕ:
9986763236
ಇ-ಮೇಲ್: vinayraj88k@gmail.com

null

ಮಧು ಎನ್.

ಪದನಾಮ:
ಮಲ್ಟಿ ಟಾಸ್ಕಿಂಗ್ ಸಹಾಯಕರು
null

ಅಲಿಕ ಸುಲ್ತಾನ

ಪದನಾಮ:
ಮಲ್ಟಿ ಟಾಸ್ಕಿಂಗ್ ಸಹಾಯಕರು
Font Resize
Contrast