ಸಂಸ್ಥೆಯು ಮೂರು ತರಬೇತಿ ಕೊಠಡಿಗಳು, ಒಂದು ಕಾನ್ಫರೆನ್ಸ್ ಕೊಠಡಿ ಮತ್ತು ಹೇಮಾವತಿ ಸಭಾಂಗಣದಲ್ಲಿ ವೀಡೀಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಹೊಂದಿದ್ದು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಆಯೋಜಿಸುವ ವಿವಿಧ ಸಭೆಗಳಿಗೆ ಸಂಸ್ಥೆಯು ವೀಡೀಯೋ ಕಾನ್ಫರೆನ್ಸ್ ಮೂಲಕ  ಹಾಜರಾಗಲು ಮತ್ತು ಗಣ್ಯರಿಂದ ವಿಶೇಷ ಉಪನ್ಯಾಸವನ್ನು ಪ್ರಶಿಕ್ಷಣಾರ್ಥಿಗಳಿಗೆ ನೀಡುವಲ್ಲಿ ಸಹಕಾರಿಯಾಗುತ್ತಿದೆ.

ಇವುಗಳಲ್ಲದೇ ಸಂಸ್ಥೆಯ ಅಧೀನ ರಾಜ್ಯದ ಜಿಲ್ಲಾ ತರಬೇತಿ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯನ್ನೂ ಸಹ ವೀಡೀಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದೆ.

Font Resize
Contrast