campus

ಆಡಳಿತ ತರಬೇತಿ ಸಂಸ್ಥೆಯಲ್ಲಿ ಸೆಮಿನಾರ್ ಹಾಲ್ ಮತ್ತು ಕಾನ್ಫರೆನ್ಸ್ ಹಾಲ್ ಗಳನ್ನು ಒಳಗೊಂಡಂತೆ ಒಟ್ಟು  17 ತರಬೇತಿ ಕೊಠಡಿಗಳಿದ್ದು, ಅವುಗಳಲ್ಲಿ  4 ತರಬೇತಿ ಕೊಠಡಿಗಳಲ್ಲಿ ಹವಾನಿಯಂತ್ರಕ ವ್ಯವಸ್ಥೆ  ಹಾಗೂ ಪ್ರತಿಯೊಂದು ತರಬೇತಿ ಕೊಠಡಿಗಳು ಸುಸಜ್ಜಿತವಾದ ಗಣಕಯಂತ್ರ, ಇಂಟರ್ ನೆಟ್ , ಮಲ್ಟಿ ಮೀಡಿಯಾ, ಆಡಿಯೋ ಸಿಸ್ಟಂನ ವ್ಯವಸ್ಥೆಯನ್ನು ಹೊಂದಿದೆ.

ಸಂಸ್ಥೆಯಲ್ಲಿ 200 ಆಸನವುಳ್ಳ ಹೇಮಾವತಿ ಸಭಾಂಗಣವಿದ್ದು, ವೀಡೀಯೋ ಕಾನ್ಫರೆನ್ಸ್, ಕೇಂದ್ರೀಕೃತ ಹವಾನಿಯಂತ್ರಕ ವ್ಯವಸ್ಥೆಯನ್ನು ಹೊಂದಿದೆ. ಹಾಗೂ ಸಭಾಂಗಣವನ್ನುಸಾಂಕೃತಿಕ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತಿದೆ.  ಇದರೊಂದಿಗೆ 70 ಆಸನವುಳ್ಳ ಸುಸಜ್ಜಿತವಾದ ವ್ಯವಸ್ಥೆಯಿರುವ ತರಬೇತಿ ಕೊಠಡಿಯೂ ಸಹ ಈ ಕಟ್ಟಡದ ಮೊದಲನೇ ಮಹಡಿಯಲ್ಲಿದೆ.

hostel

ಕಪಿಲ ವಸತಿನಿಲಯ
ದಿನಾಂಕ ೦೯-೦೮-೧೯೭೯ರಲ್ಲಿ ಆಗಿನ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಗಳು ಕಪಿಲ ವಸತಿನಿಲದ ಉದ್ಘಾಟನೆಯನ್ನು ನೆರವೇರಿಸಿರುತ್ತಾರೆ. ಕಪಿಲವಸತಿನಿಯದಲ್ಲಿ ಒಟ್ಟು ೫೨ ಕೊಠಡಿಗಳು ಇರುತ್ತವೆ. ೫೨ ಕೊಠಡಿಗಳಲ್ಲಿ ೪೬ ಎರಡು ಮಂಚಗಳ ಕೊಠಡಿಗಳು ಹಾಗೂ ೬ ಫ್ಯಾಮಿಲಿ ಕೊಠಡಿಗಳು ಇರುತ್ತವೆ.

ಕಬಿನಿ ವಸತಿನಿಲಯ
ದಿನಾಂಕ ೧೩-೧೧-೨೦೧೦ರಲ್ಲಿ ಆಗಿನ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳು ಕಬಿನಿ ವಸತಿನಿಲದ ಉದ್ಘಾಟನೆಯನ್ನು ನೆರವೇರಿಸಿರುತ್ತಾರೆ. ಕಬಿನಿವಸತಿನಿಯದಲ್ಲಿ ಒಟ್ಟು ೧೧೨ ಕೊಠಡಿಗಳು ಇರುತ್ತವೆ. ೧೧೨ ಕೊಠಡಿಗಳಲ್ಲಿ ೬೪ ಎರಡು ಮಂಚಗಳ ಕೊಠಡಿಗಳು, ೩೨ ಒಂದು ಮಂಚದ ಕೊಠಡಿಗಳು ಹಾಗೂ ೧೬ ಫ್ಯಾಮಿಲಿ ಕೊಠಡಿಗಳು ಇರುತ್ತವೆ.

ತರಬೇತಿಗೆ ಬರುವಂತಹ ಅಧಿಕಾರಿಗಳು/ ಪ್ರಶಿಕ್ಷಣಾರ್ಥಿಗಳಿಗೆ ಕಬಿನಿ ಮತ್ತು ಕಪಿಲ ವಸತಿನಿಲಯಗಳಲ್ಲಿ ಕೊಠಡಿಗಳ ಲಭ್ಯತೆಯ ಅನುಸಾರವಾಗಿ ವಾಸ್ತವ್ಯಕ್ಕೆ ಕೊಠಡಿಗಳನ್ನು ನೀಡಲಾಗುವುದು. ವಾಸ್ತವ್ಯದ ಕೊಠಡಿಗಳಲ್ಲಿ ಕಂಪ್ಯೂಟರ್, ಟಿವಿಯ ವ್ಯವಸ್ಥೆ ಇರುತ್ತದೆ. ದಿನ ಪತ್ರಿಕೆಗಳನ್ನು ಓದಲು ಹಾಗೂ ಅಧಿಕಾರಿಗಳು/ ಪ್ರಶಿಕ್ಷಣಾರ್ಥಿಯವರನ್ನು ನೋಡಲು ಬರುವವರ ಅನುಕೂಲಕ್ಕಾಗಿ ಎರಡು ವಸತಿನಿಲಯದ ಪ್ರಾಂಗಣದಲ್ಲಿ ಸೋಫಾ ಸೆಟ್‌ಗಳನ್ನು ಇರಿಸಲಾಗಿರುತ್ತದೆ.

ಬೇಸ್ ಮೆಂಟ್
೧. ಊಟದ ಹಾಲ್.
೨. ಜಿಮ್ ರೂಮ್.
೩. ಒಳ ಕ್ರೀಡಾಂಗಣ.
೪. ವಾಹನ ನಿಲುಗಡೆ.

ನೆಲ ಮಹಡಿ
೧. ಸೆಮಿನಾರ್ ಹಾಲ್.

ಮೊದಲನೇ ಮಹಡಿ
೧. ತರಬೇತಿ ಹಾಲ್-೧.

ಎರಡನೇ ಮಹಡಿ
೧. ತರಬೇತಿ ಹಾಲ್-೨.
೨. ಕಾನ್ಪರೆನ್ಸ್ ಹಾಲ್-೧.

ಮೂರನೇ ಮಹಡಿ
೧. ತರಬೇತಿ ಹಾಲ್-೩.
೨. ತರಬೇತಿ ಹಾಲ್-೪.

ನಾಲ್ಕನೇ ಮಹಡಿ
೧. ಹೋಮ್ ಥೀಯೇಟರ್.
೨. ಕಾನ್ಪರೆನ್ಸ್ ಹಾಲ್-೨.

sports

ಜಿಮ್ ವ್ಯವಸ್ಥೆ

ಸಂಸ್ಥೆಯ ಕಬಿನಿ ವಸತಿನಿಲಯದ ಬೇಸ್‌ಮೆಂಟ್ ನಲ್ಲಿ ಒಂದು ಜಿಮ್ ಇದ್ದು ಅದರಲ್ಲಿ ಒಂದು ಮಲ್ಟಿ ಜಿಮ್, ಆಬ್ ಎಕ್ಸ್ಸೈಸರ್, ತ್ರೆಡ್ ಮಿಲ್, ಸೈಕಲ್ ವ್ಯವಸ್ಥೆ ಇರುತ್ತದೆ.

ಸಂಸ್ಥೆಯ ಕ್ರೀಡಾ ಸಮುಚ್ಚಯದಲ್ಲಿ ಮಲ್ಟಿ ಜಿಮ್, ಆಬ್ ಎಕ್ಸ್ಸೈಸರ್, ತ್ರೆಡ್ ಮಿಲ್, ಸೈಕಲ್ ವೈಬ್ರೆಟರ್ ಕ್ರಾಸ್ ಟ್ರೆನರ್ ನ ವ್ಯವಸ್ಥೆ ಇರುತ್ತದೆ.

ಕ್ರೀಡಾ ವ್ಯವಸ್ಥೆ
ಸಂಸ್ಥೆಯ ಕಬಿನಿ ವಸತಿನಿಲಯದ ಬೇಸ್‌ಮೆಂಟ್ ನಲ್ಲಿ ಒಂದು ಒಳಾಂಗಣ ಕ್ರೀಡಾ ಕೊಠಡಿ ಇದ್ದು ಅದರಲ್ಲಿ ಟಿಟಿ, ಕೇರಂ ಚೆಸ್ ಆಟಗಳನ್ನು ಆಡಲು ವ್ಯವಸ್ಥೆ ಇರುತ್ತದೆ.

ಸಂಸ್ಥೆಯ ಕ್ರೀಡಾ ಸಮುಚ್ಚಯದಲ್ಲಿ ಷಟಲ್ ಕಾಕ್, ಟಿಟಿ, ಕೇರಂ ಚೆಸ್ , ಬ್ಯಾಸಕೆಟ್ ಬಾಲ್ ಆಟಗಳನ್ನು ಆಡಲು ಹಾಗೂ ಹೊರಗಾಂಣ ಕ್ರೀಡೆಗಳಾದ ಕ್ರಿಕೆಟ್, ವಾಲಿ ಬಾಲ್, ಟೆನ್ನಿಸ್, ಫುಟ್ ಬಾಲ್, ಥ್ರೊ ಬಾಲ್, ಹ್ಯಾಂಡ್ ಬಾಲ್, ಷಾಟ್‌ ಪುಟ್, ಜಾವಲಿನ್ ಕ್ರೀಡೆಗಳನ್ನು ಆಡಲು ಬೇಕಾಗಿರುವ ಎಲ್ಲಾ ಕ್ರೀಡಾ ಸಾಮಾಗ್ರಿ ಹಾಗೂ ಆಟಗಳನ್ನು ಆಡಲು ಜಾಗದ ವ್ಯವಸ್ಥೆ ಇರುತ್ತದೆ.

ವಸತಿ ನಿಲಯದ ನಿಯಮಾವಳಿಗಳು

  1. ಕೊಠಡಿಯಿಂದ ಹೊರಗೆ ಹೋಗುವಾಗ, ನಗದು, ಆಭರಣ, ಮೊಬೈಲ್ ಇತ್ಯಾದಿ ಬೆಲೆಬಾಳುವ ಅಮೂಲ್ಯ ವಸ್ತುಗಳನ್ನು ತಮ್ಮ ವಶದಲ್ಲಿಯೇ ಇರಿಸಿಕೊಳ್ಳುವುದು.
  2. ಕೊಠಡಿಯನ್ನು ಲಾಕ್ ಮಾಡುವ ಮೊದಲು ವಿದ್ಯತ್ ದೀಪ, ವಿದ್ಯುತ್ ಫಂಕ, ದೂರದರ್ಶನ ಪೆಟ್ಟಿಗೆಯನ್ನು ಬಂದ್ ಮಾಡುವುದು
  3. ಕೊಠಡಿಯನ್ನು ಲಾಕ್ ಮಾಡುವ ಮೊದಲು ನೀರಿನ ನಲ್ಲಿಗಳನ್ನು ಬಂದ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು
  4. ಕೊಠಡಿಯನ್ನು ಲಾಕ್ ಮಾಡಿದ ಬಳಿಕ ಕೀಗಳನ್ನು ರೆಸೆಪ್ಷನ್ ಕೌಂಟರ್ ಗೆ ನೀಡುವುದು
  5. ಕೊಠಡಿಗಳನ್ನು ಶುಚಿಗೊಳಿಸಲು ಕೀಗಳನ್ನು ರೆಸೆಪ್ಷನ್ ಕೌಂಟರ್ ಗೆ ನೀಡುವುದು
  6. ರಾತ್ರಿ 10.00ಗಂಟೆಯ ಒಳಗೆ ಕೊಠಡಿಗಳಿಗೆ ಹಿಂದಿರುಗುವುದು
  7. ಬೆಲೆಬಾಳುವ ಅಮೂಲ್ಯ ವಸ್ತುಗಳನ್ನು ರಿಸೆಪ್ಷನ್ ಬಳಿ ಇರಿಸುವಂತಿಲ್ಲ
  8. ಸಿಬ್ಬಂದಿಗಳಿಗೆ ಟಿಪ್ಸ್ ಅನ್ನು ನೀಡುವಂತಿಲ್ಲ
  9. ಟಿಪ್ಸ್ ಅನ್ನು ಸಿಬ್ಬಂದಿ ಕಲ್ಯಾಣ ನಿಧಿಯಲ್ಲಿಡಿ
  10. ಕೊಠಡಿಗಳಲ್ಲಿ ಕುಟುಂಬ ವರ್ಗದವರಿಗೆ ಅವಕಾಶವಿಲ್ಲ.
Font Resize
Contrast