ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಪ್ರಾಥಮಿಕ ಆರೋಗ್ಯ ಘಟಕವು 1986ರಲ್ಲಿ ಪ್ರಾರಂಭವಾಯಿತು. 33 ವರ್ಷಗಳ ಇತಿಹಾಸವಿರುವ ಈ ಘಟಕವು ಆಡಳಿತ ತರಬೇತಿ ಸಂಸ್ಥೆ, ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು, ಅಧಿಕಾರಿ, ಸಿಬ್ಬಂಧಿ ವರ್ಗ ಹೊರಗುತ್ತಿಗೆಯ ತೋಟಗಾರಿಕಾ ಸಿಬ್ಬಂಧಿ, ಭದ್ರತಾ ಸಿಬ್ಬಂದಿ, ಮತ್ತು ಅವರ ಕುಟುಂಬ ವರ್ಗದವರಿಗೆ ಮೀಸಲಾಗಿದ್ದು ಇವರಿಗೆಲ್ಲ ಉತ್ತಮ ಸೇವೆ ಒದಗಿಸುವಲ್ಲಿ ಶ್ರಮಿಸುತ್ತಿದೆ.

ಈ ಘಟಕವು ತುರ್ತಾಗಿ ಬೇಕಾದ ಪ್ರಥಮ ಚಿಕಿತ್ಸೆ ಮತ್ತು ಎಲ್ಲಾ ತರಹದ ಸಾಮಾನ್ಯ ತೊಂದರೆಗಳಿಗೆ ಸೇವೆ ಒದಗಿಸುತ್ತಿದೆ, ಹಾಗೂ  ಇಲ್ಲಿಯ ಪ್ರಶಿಕ್ಷಣಾರ್ಥಿಗಳು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಕುಟುಂಬದವರ ಅನುಕೂಲಕ್ಕಾಗಿ ಆರೋಗ್ಯ ಶಿಬಿರಗಳಾದ ಕಣ್ಣಿನ ತಪಾಸಣೆ, ದಂತ ಶಿಬಿರ, ಹೃದಯಕ್ಕೆ ಸಂಬಂಧಿಸಿದ ಶಿಬಿರ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಶಿಬಿರ ಹೀಗೆ ಹಲವು ಶಿಬಿರಗಳನ್ವಯ ನಿಯಮಿತವಾಗಿ ನಡೆಸುತ್ತಿದ್ದೇವೆ ಹಾಗೂ ಶುಚಿತ್ವದ ಮಹತ್ವ, ಪರಿಸರ ನೈರ್ಮಲ್ಯ, ಪೌಷ್ಠಿಕ ಆಹಾರ, ಸಾಂಕ್ರಾಮಿಕ ರೋಗ, ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅವಶ್ಯಕತೆ ಇರುವವರಿಗೆ ಆಪ್ತ ಸಮಾಲೋಚನೆ ಹೀಗೆ ಬರುವ ೆಲ್ಲರಿಗೂ ಉಪಯುಕ್ತವಾಗುವ ಹಾಗೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ.

ಇಲ್ಲಿಯ ಘಟಕದಲ್ಲಿ ಓರ್ವ ಫಾರ್ಮಾಸಿಸ್ಟ್, ಓರ್ವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಇಬ್ಬರು ಗುಂಪು ‘ಡಿ’ ನೌಕರರುಗಳನ್ನು ಒಳಗೊಂಡಿದೆ, ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತಿದ್ದು ಇವರೆಲ್ಲರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಾಥಮಿಕ ಆರೋಗ್ಯಕ್ಕೆ ಬರುವ ಎಲ್ಲರಿಗೂ ಸಮಾನಾಂತರವಾಗಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಅವರೆಲ್ಲರ ಇಚ್ಛೆಗೆ ತಕ್ಕಂತೆ ಸ್ಪಂದಿಸಿ ಉತ್ತಮ ಸೇವೆ ಒದಗಿಸುವಲ್ಲಿ ಈ ಪ್ರಾಥಮಿಕ ಆರೋಗ್ಯ ಘಟಕವು ಶ್ರಮಿಸುತ್ತಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ.

ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಎಲ್ಲಾ ಕೆಲಸದ ದಿನಗಳಲ್ಲಿ

ಬೆಳಗ್ಗೆ 9.00 ರಿಂದ ಸಂಜೆ 4.30ಗಂಟೆಯವರೆಗೆ ಪ್ರಾಥಮಿಕ ಆರೋಗ್ಯ ಘಟಕವು ಕಾರ್ಯನಿರ್ವಹಿಸುತ್ತದೆ

ಕ್ರಮ ಸಂಖ್ಯೆ  ಹೆಸರು ಪದ ನಾಮ ಮತ್ತು ವಿವರ ಭಾವ ಚಿತ್ರ
1 ಶ್ರೀಮತಿ ಅಶ್ವಿನಿ ವೈ ಎಸ್ ವೈದ್ಯಕಿಯ ಅಧಿಕಾರಿ

ದೂರವಾಣಿ: 9886242457,

ಇಮೇಲ್ : shwinisomegowda@hotmail.com

2 ಶ್ರೀಮತಿ ಕವಿತ ಫಾರ್ಮಸಿಸ್ಟ್

ದೂರವಾಣಿ: 9980942101

ಇಮೇಲ್: ati.phu4@ka.gov.in

3 ಶ್ರೀಮತಿ ಲೀಲಾವತಿ ಕೆ ಆರ್ ಕಿರಿಯ ಅರೋಗ್ಯ ಸಹಾಯಕ

ದೂರವಾಣಿ:7676148599

ಇಮೇಲ್: leelavathikr41@gmail.com

4 ಶ್ರೀ ದಿನೇಶ್ ಎಸ್ ಗ್ರೂಪ್ ಡಿ

ದೂರವಾಣಿ:9945988269

ಇಮೇಲ್: ds0546666@gmail.com

Font Resize
Contrast