ಆಡಳಿತ ತರಬೇತಿ ಸಂಸ್ಥೆಯು ಕರ್ನಾಟಕ ರಾಜ್ಯ ಸರಕಾರದ ಒಂದು ಉನ್ನತ ತರಬೇತಿ ಸಂಸ್ಥೆಯಾಗಿರುತ್ತದೆ.  ಆಡಳಿತ ತರಬೇತಿ ಸಂಸ್ಥೆಯ ಗ್ರಂಥಾಲಯವು ಸಾಮಾಜಿಕ ವಿಜ್ಞಾನ, ಸಾರ್ವಜನಿಕ ಆಡಳಿತ, ನಿರ್ವಹಣಾಶಾಸ್ತ್ರ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ವಿಕೋಪ ನಿರ್ವಹಣೆ, ಮಹಿಳಾ ಅಧ್ಯಯನ, ಕಂಪ್ಯೂಟರ್ ವಿಜ್ಞಾನ, ಕಾನೂನು ಮತ್ತು ಸಂಬಂಧಿತ ವಿಷಯಗಳನ್ನು ಒಳಗೊಂಡ ಪುಸ್ತಕಗಳು, ವರದಿಗಳು, ಮ್ಯಾನ್ಯುಯಲ್‍ಗಳು, ಗೆಝೆಟ್‍ಗಳು, ನಿಯತಕಾಲಿಕಗಳು, ಮ್ಯಾಗಝೀನ್‍ಗಳು, ತರಬೇತಿಯ ಓದುವ ಸಾಮಗ್ರಿಗಳು ಮತ್ತು ಪರಾಮರ್ಶನ ಸಾಮಗ್ರಿಗಳನ್ನು ಒಳಗೊಂಡಂತೆ 61358 ಪುಸ್ತಕಗಳನ್ನು ಒಳಗೊಂಡಿರುತ್ತದೆ.  ಗ್ರಂಥಾಲಯದ ಸಂಗ್ರಹಣೆಯು ಪ್ರತಿ ವರ್ಷ ಹೊಸ ಪುಸ್ತಕಗಳು, ನಿಯತಕಾಲಿಕಗಳು, ಮ್ಯಾಗಝೀನ್‍ಗಳ ಸೇರ್ಪಡೆಯಿಂದಾಗಿ ವೃದ್ಧಿಯಾಗುತ್ತಿರುತ್ತದೆ. ಗ್ರಂಥಾಲಯದ ಸಂಗ್ರಹಣೆ ಅಭಿವೃದ್ಧಿಗಾಗಿ ಆಡಳಿತ ತರಬೇತಿ ಸಂಸ್ಥೆಯಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿ, ಬೋಧಕರು, ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು ಮತ್ತು ಸಿಬ್ಬಂದಿಗಳು ಸಲಹೆ ಮಾಡುವ ಪುಸ್ತಕಗಳನ್ನು ಖರೀದಿ ಮಾಡಲಾಗುತ್ತಿರುತ್ತದೆ.  ಗ್ರಂಥಾಲಯದ ಪುಸ್ತಕಗಳನ್ನು ಡಿಡಿಸಿ ವರ್ಗೀಕರಣದ ಅನುಸಾರ ಜೋಡಿಸಲಾಗಿರುತ್ತದೆ.  ಪ್ರಸ್ತುತಗ್ರಂಥಾಲಯದಲ್ಲಿ ನ್ಯಾಷನಲ್‍ಇನ್ಫಾಮ್ರ್ಯಾಟಿಕ್ಸೆ ಸೆಂಟರ್, ಇವರು ಅಭಿವೃದ್ಧಿಪಡಿಸಿರುವ ಈ-ಗ್ರಂಥಾಲಯ 4.0 ಮಾದರಿಯಗ್ರಂಥಾಲಯ ಸಾಫ್ಟ್‍ವೇರ್‍ನ್ನು ಬಳಸಲಾಗುತ್ತಿರುತ್ತದೆ.  ಗ್ರಂಥಾಲಯದ ಉನ್ನತೀಕರಣದ ಪ್ರಕ್ರಿಯೆ ಚಾಲನೆಯಲ್ಲಿದ್ದು, ಗ್ರಂಥಾಲಯವು ಸಂಪೂರ್ಣವಾಗಿ ಗಣಕೀಕೃತವಾಗುತ್ತಿದ್ದು, ಶೀಘ್ರದಲ್ಲಿಯೇ ವೆಬ್‍ಒಪಾಕ್ ಮುಖಾಂತರ ಗ್ರಂಥಾಲಯದ ಸಂಗ್ರಹಣೆಯ ಗ್ರಂಥಸೂಚಿಯ ವಿವರಗಳನ್ನು ಪಡೆಯುವ ಸೌಲಭ್ಯವನ್ನು ಒದಗಿಸಲಾಗುವುದು.  ಗ್ರಂಥಾಲಯದ ಸಿಬ್ಬಂದಿಗಳು ಗ್ರಂಥಾಲಯ ಬಳಕೆದಾರರ ಮಾಹಿತಿ ಅಗತ್ಯಗಳನ್ನು ಒದಗಿಸಲು ನಿರಂತರ ಪ್ರಯತ್ನ ಮಾಡುತ್ತಿರುತ್ತಾರೆ.  ಗ್ರಂಥಾಲಯದ ಬಳಕೆದಾರರನ್ನು ಗ್ರಂಥಾಲಯದ ಪುಸ್ತಕಗಳು, ಮಾಹಿತಿಗಳು ಮತ್ತು ಗುಣದಮಟ್ಟದ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸ್ವಾಗತಿಸುತ್ತೇವೆ.

ಸದಸ್ಯರುಗಳಿಗೆ ಪುಸ್ತಕಗಳ ಮತ್ತು ಮ್ಯಾಗಝೀನ್‍ಗಳ ಮತ್ತು ನಿಯತಕಾಲಿಕಗಳ ಎರವಲು ಸೇವೆ.

 1. ಗ್ರಂಥಾಲಯದ ಸದಸ್ಯರುಗಳಿಗೆ ಪುಸ್ತಕಗಳನ್ನು ಪಡೆಯುವ ಸಲುವಾಗಿ ಎರವಲು ಚೀಟಿಗಳನ್ನು ವಿತರಿಸಲಾಗುವುದು.
 2. ಸದಸ್ಯರುಗಳು ಪುಸ್ತಕಗಳನ್ನು ಮತ್ತು ಮ್ಯಾಗಝೀನ್‍ಗಳನ್ನು ಎರವಲು ಪಡೆಯಬಹುದು.
 3. ಮ್ಯಾಗಝೀನ್‍ಗಳು ಮತ್ತು ವೃತ್ತಪತ್ರಿಕೆಗಳ ಚಾಲ್ತಿ ಆವೃತ್ತಿಗಳನ್ನು ಎರವಲು ನೀಡಲಾಗುವುದಿಲ್ಲ.
 4. ಎರವಲು ಪಡೆದ ಪುಸ್ತಕಗಳನ್ನು ನಿಗದಿತ ಸಮಯಅಂದರೆ 15 ದಿನಗಳ ಒಳಗಾಗಿ ಗ್ರಂಥಾಲಯಕ್ಕೆ ಹಿಂದಿರುಗಿಸಬೇಕು ಅಥವಾ ಪುಸ್ತಕಗಳನ್ನು ತಂದು ನವೀಕರಣ ಮಾಡಿಕೊಳ್ಳಬೇಕು.
 5. ಸದಸ್ಯರು ತಮಗಲ್ಲದೇ ಬೇರೆಯಾರಿಗೂ ಪುಸ್ತಕಗಳನ್ನು ಎರವಲು ಪಡೆಯುವಂತಿಲ್ಲ. ಸದಸ್ಯರುಗಳು ತಮ್ಮಎರವಲು ಚೀಟಿಗಳನ್ನು ಬೇರೆಯವರಿಗೆ ಪುಸ್ತಕಗಳನ್ನು ಪಡೆಯುವ ಸಲುವಾಗಿ ನೀಡತಕ್ಕದ್ದಲ್ಲ.
 6. ಗ್ರಂಥಾಲಯದ ಒಳಗೆ ಕೇವಲ ಸದಸ್ಯರುಗಳಿಗೆ ಮಾತ್ರ ಪ್ರವೇಶಇರುತ್ತದೆ. ಆದರೆ ಸದಸ್ಯರುಗಳ ಪ್ರತಿನಿಧಿಗಳು ಸದಸ್ಯರಿಂದ ಪಡೆದಅಧಿಕಾರ ಪತ್ರವನ್ನು ಹಾಜರುಪಡಿಸಿ ಪುಸ್ತಕಗಳನ್ನು ಪಡೆಯಬಹುದಾಗಿರುತ್ತದೆ.
 7. ಗ್ರಂಥಾಲಯದಿಂದಎರವಲು ಪಡೆದ ಪುಸ್ತಕಗಳಿಗೆ ಎರವಲು ಪಡೆದ ಸದಸ್ಯರೇ ಜವಾಬ್ದಾರರಾಗಿರುತ್ತಾರೆ.
 8. ಗ್ರಂಥಾಲಯದ ಕೌಂಟರ್ ಬಿಡುವ ಮುನ್ನ ಸದಸ್ಯರುಗಳು ಪುಸ್ತಕಗಳ ಉತ್ತಮ ಸ್ಥಿತಿಯ ಬಗ್ಗೆ ಗಮನ ಹರಿಸಬೇಕು. ಪುಸ್ತಕದ ಸ್ಥಿತಿಯು ಉತ್ತಮವಾಗಿಲ್ಲದಿದ್ದಲ್ಲಿ ಕೂಡಲೇ ಗ್ರಂಥಪಾಲಕರ ಗಮನಕ್ಕೆ ತರಬೇಕು. ಇಲ್ಲವಾದಲ್ಲಿ ಪುಸ್ತಕದ ಸ್ಥಿತಿಯ ಬಗ್ಗೆ ಸದಸ್ಯರೇ ಜವಾಬ್ದಾರರಾಗಿದ್ದು, ಉತ್ತಮ ಸ್ಥಿತಿಯ ಪುಸ್ತಕವನ್ನು ಖರೀದಿಸಿ ಕೊಡಬೇಕಾಗುತ್ತದೆ ಅಥವಾ ಪುಸ್ತಕದ ಮೌಲ್ಯ ಮತ್ತುಇತರೇ ವೆಚ್ಚಗಳನ್ನು ಸದಸ್ಯರೇ ಭರಿಸಬೇಕಾಗುತ್ತದೆ.
 9. ಸದಸ್ಯರು ಎರವಲು ಪಡೆದ ಪುಸ್ತಕಗಳನ್ನು ಯಾವುದೇ ಸಮಯದಲ್ಲಿ ಗ್ರಂಥಾಲಯಕ್ಕೆ ಹಿಂದಿರುಗಿಸುವಂತೆ ಗ್ರಂಥಪಾಲಕರು ಒತ್ತಾಯಿಸಬಹುದು.
 10. ಸದಸ್ಯರುತಮಗೆ ಬೇಕಾಗುವ ಯಾವುದೇ ಪುಸ್ತಕವನ್ನು ತಮಗೆ ಕಾಯ್ದಿರಿಸುವಂತೆ ಗ್ರಂಥಪಾಲಕರನ್ನು  ಕೋರಬಹುದು.
 11. ಪರಾಮರ್ಶನ ಗ್ರಂಥಗಳನ್ನು ಹೊರತುಪಡಿಸಿ ಪುಸ್ತಕಗಳನ್ನು ಮಾತ್ರ ಸದಸ್ಯರುಗಳಿಗೆ ಎರವಲು ನೀಡಲಾಗುವುದು.
 12. ಪರಾಮರ್ಶನ ಗ್ರಂಥಗಳನ್ನು ಯಾವುದೇ ಸದಸ್ಯರುಗಳಿಗೆ ಗ್ರಂಥಾಲಯದ ಹೊರಗೆತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುವುದಿಲ್ಲ.
 13. ಸದಸ್ಯರುಗಳಿಗೆ ಅವರುಗಳಿಗೆ ನಿಗಧಿಪಡಿಸಿದಷ್ಟು ಪುಸ್ತಕಗಳನ್ನು ಮಾತ್ರಎರವಲು ನೀಡಲಾಗುವುದು. ಬೋಧಕ ಸಿಬ್ಬಂದಿಗಳು ಮಹಾ ನಿರ್ದೇಶಕರಿಂದ ಅನುಮತಿ ಪಡೆದು ತರಬೇತಿ ಕಾರ್ಯಕ್ರಮಕ್ಕೆ ಅಥವಾ ಯಾವುದೇ ಯೋಜನಾ ಕಾರ್ಯಗಳಿಗೆ ಅಗತ್ಯವಿದ್ದಲ್ಲಿ ಹೆಚ್ಚುವರಿ ಪುಸ್ತಕಗಳನ್ನು ಪಡೆಯಬಹುದಾಗಿರುತ್ತದೆ.
 14. ಕಛೇರಿ ಸಿಬ್ಬಂದಿಗಳು, ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರು ಇಲಾಖಾ ಪರೀಕ್ಷೆಗಳಿಗೆ ಬೇಕಾಗುವ ಅಧಿನಿಯಮ ಮತ್ತು ನಿಯಮಗಳ ಪುಸ್ತಕಗಳನ್ನು ವಿಶೇಷ ಅನುಮತಿ ಪಡೆದು ಎರವಲು ಪಡೆಯಬಹುದಾಗಿರುತ್ತದೆ.
 15. ಪುಸ್ತಕಗಳನ್ನು ಎರವಲು ನೀಡುವಾಗ ಬುಕ್‍ಕಾರ್ಡ್‍ನಲ್ಲಿ ಸದಸ್ಯರು ಕಡ್ಡಾಯವಾಗಿ ಸ್ವೀಕೃತಿ ಸಹಿ ಮಾಡಬೇಕು ಅಥವಾ ಕೋರಿಕೆ ಚೀಟಿಯನ್ನು ನೀಡತಕ್ಕದ್ದು.
 16. ಗ್ರಂಥಾಲಯದ ಸದಸ್ಯತ್ವ ಪಡೆದಯಾವುದೇ ಬೋಧಕರು, ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿಗಳು ಅವರುಗಳ ವರ್ಗಾವಣೆ, ನಿವೃತ್ತಿ, ತರಬೇತಿಕಾರ್ಯಕ್ರಮ ಮುಕ್ತಾಯ ಆದತಕ್ಷಣ ಗ್ರಂಥಾಲಯದಿಂದ ಎರವಲು ಪಡೆದ ಪುಸ್ತಕಗಳು, ಮ್ಯಾಗಝೀನ್‍ಗಳನ್ನು ಹಿಂದಿರುಗಿಸತಕ್ಕದ್ದು.  ಇಲ್ಲವಾದಲ್ಲಿ ಗ್ರಂಥಾಲಯದಿಂದ ಬೇಬಾಕಿ ಪ್ರಮಾಣ ಪತ್ರವನ್ನು ನೀಡಲಾಗುವುದಿಲ್ಲ.
 17. ಸಾಮಾನ್ಯವಾಗಿ ಅಧಿನಿಯಮಗಳು, ನಿಯಮಗಳು, ಮ್ಯಾನ್ಯುಯಲ್‍ಗಳು, ವರದಿಗಳು, ನಿಯತಕಾಲಿಕೆಗಳ ಚಾಲ್ತಿ ಸಂಚಿಕೆಗಳು ಇವುಗಳನ್ನು ಗ್ರಂಥಾಲಯದ ಹೊರಗೆ ಕೊಂಡೊಯ್ಯಲು ಅನುಮತಿ ಇರುವುದಿಲ್ಲ. ಇವುಗಳನ್ನು ಗ್ರಂಥಾಲಯದ ಒಳಗೆ ಪರಾಮರ್ಶಿಸಬಹುದಾಗಿರುತ್ತದೆ.
 18. ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ಪುಸ್ತಕಗಳನ್ನು ಕೇವಲ 3 ದಿನಗಳ ಅವಧಿಗಾಗಿ ಮಾತ್ರ ಎರವಲು ನೀಡಲಾಗುವುದು. ಸದಸ್ಯರುಗಳು ಇಂತಹ ಪುಸ್ತಕಗಳನ್ನು ಪುನಃ 3 ದಿನಗಳ ಅವಧಿಗಾಗಿ ನವೀಕರಿಸಿಕೊಳ್ಳಬಹುದಾಗಿರುತ್ತದೆ.
 19. ಬೋಧಕರು, ಸಿಬ್ಬಂದಿಗಳು, ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಗ್ರಂಥಾಲಯದ ಸದಸ್ಯರುಗಳು ನಿಗಧಿತ ಅವಧಿಯಲ್ಲಿ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಹಿಂದಿರುಗಿಸದೇ ಇದ್ದಲ್ಲಿ ಪ್ರತಿ ಪುಸ್ತಕಕ್ಕೆ ಪ್ರತಿ ದಿನಕ್ಕೆ 50 ಪೈಸೆಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಮತ್ತು ಅಂತಹ ಸದಸ್ಯರುಗಳಿಗೆ ಪುಸ್ತಕ ಎರವಲು ಸೇವೆಯನ್ನು ನಿಲ್ಲಿಸಲಾಗುವುದು.
 20. ಯಾವುದೇ ಸದಸ್ಯರು ಗ್ರಂಥಾಲಯದಿಂದ ಎರವಲು ಪಡೆದ ಪುಸ್ತಕಗಳು/ ನಿಯತಕಾಲಿಕಗಳು/ ಮ್ಯಾಗಝೀನ್‍ಗಳನ್ನು ಕಳೆದು ಹಾಕಿದಲ್ಲಿ ಅಥವಾ ಹಾನಿ ಮಾಡಿದಲ್ಲಿ ಅವರೇ ಅದೇ ಪುಸ್ತಕವನ್ನು ತಂದುಕೊಡಬೇಕಾಗುತ್ತದೆ. ಸದಸ್ಯರು ಕಳೆದುಹಾಕಿದ ಅಥವಾ ಹಾನಿಗೊಳಿಸಿದ ಪುಸ್ತಕಗಳು ದೊರೆಯದೇ ಇದ್ದಲ್ಲಿ ಅಂತಹ ಪುಸ್ತಕದ ಬೆಲೆಯ ಹತ್ತು ಪಟ್ಟು ಮೌಲ್ಯ ಮತ್ತು ಅಂಚೆ ವೆಚ್ಚಗಳನ್ನು ಮಹಾ ನಿರ್ದೇಶಕರ ವಿವೇಚನಾ ಅನುಸಾರ ದಂಡವಾಗಿ ವಿಧಿಸಲಾಗುವುದು. ದಂಡವನ್ನು ಪಾವತಿಸಲು ವಿಫಲರಾದಲ್ಲಿ ಅಂತಹ ಸದಸ್ಯರ ವೇತನದಿಂದ ದಂಡದ ಹಣವನ್ನು ವಸೂಲು ಮಾಡಲಾಗುವುದು.
 21. ಗ್ರಂಥಾಲಯದಿಂದ ಎರವಲು ಪಡೆದ ಪುಸ್ತಕಗಳನ್ನು ಹಿಂದಿರುಗಿಸಲು ನಿಗಧಿಪಡಿಸಿದ ಕನಿಷ್ಠ ಅವಧಿ ಮೈಸೂರಿನಲ್ಲಿ ವಾಸಿಸುವ ಸದಸ್ಯರಿಗೆ 2 ವಾರಗಳು ಮತ್ತು ಮೈಸೂರಿನಿಂದ ಹೊರಗೆ ವಾಸಿಸುವ ಸದಸ್ಯರುಗಳಿಗೆ ಒಂದು ತಿಂಗಳು ಆಗಿರುತ್ತದೆ.
 22. ಗ್ರಂಥಪಾಲಕರ ಗಮನಕ್ಕೆ ತಾರದೇಯಾವುದೇ ಸದಸ್ಯರುಗಳು ಯಾವುದೇ ಪುಸ್ತಕಗಳು, ನಿಯತಕಾಲಿಕಗಳು, ಮ್ಯಾಗಝೀನ್‍ಗಳು ಮತ್ತು ವೃತ್ತಪತ್ರಿಕೆಗಳನ್ನು ಗ್ರಂಥಾಲಯದ ಹೊರಗೆತೆಗೆದುಕೊಂಡು ಹೋಗತಕ್ಕದ್ದಲ್ಲ.
 23. ಯಾವುದೇ ಸದಸ್ಯರು ಯಾವುದೇ ಪುಸ್ತಕವನ್ನು ಗ್ರಂಥಾಲಯದ ಹೊರಗೆ ಅಥವಾ ಓದುವ ಕೊಠಡಿಗೆ ತೆಗೆದುಕೊಂಡು ಹೋದಲ್ಲಿ ಪುಸ್ತಕವನ್ನು ಸುಸ್ಥಿತಿಯಲ್ಲಿ ಮತ್ತು ಪುಸ್ತಕಕ್ಕೆ ಯಾವುದೇ ಹಾನಿಯಾಗದಂತೆ ಗ್ರಂಥಪಾಲಕರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಪುಸ್ತಕವನ್ನು ಯಾವುದೇ ರೀತಿಯಲ್ಲಿ ಹಾನಿಗೊಳಿಸಿದಲ್ಲಿ ಅಥವಾ ಹಾಳು ಮಾಡಿದಲ್ಲಿ ಪುಸ್ತಕದ ಬೇರೆ ಪ್ರತಿಯನ್ನು ತಂದುಕೊಡುವ ಅಥವಾ ಮಹಾ ನಿರ್ದೇಶಕರು ನಿಗಧಿಪಡಿಸುವ ದಂಡವನ್ನು ಪಾವತಿಸಲು ಬದ್ಧರಾಗಿರುತ್ತಾರೆ.
 24. ಸದಸ್ಯರು ನಿಯಮಾನುಸಾರ ಯಾವುದೇ ಪುಸ್ತಕಗಳು/ ಮ್ಯಾಗಝೀನ್‍ಗಳು/ ನಿಯತಕಾಲಿಕಗಳು/ ಗ್ರಂಥಾಯದ ಯಾವುದೇ ದಾಖಲೆಗಳ ಮೇಲೆ ಯಾವುದೇ ರೀತಿಯ ಬರಹಗಳನ್ನು ಮಾಡುವುದು, ಹಾನಿಗೊಳಿಸುವುದು, ಹಾಳೆಗಳನ್ನು ಹರಿದು ಹಾಕುವುದು ಅಥವಾ ಯಾವುದೇ ರೀತಿಯ ಗುರುತುಗಳನ್ನು ಮಾಡತಕ್ಕದ್ದಲ್ಲ. ಗ್ರಂಥಾಲಯದ ಯಾವುದೇ ಪುಸ್ತಕಗಳಲ್ಲಿ ಯಾವುದೇ ಗುರುತುಗಳನ್ನು ಮಾಡುವುದು ಮತ್ತು ಬರೆಯುವುದನ್ನು ನಿಷೇಧಿಸಲಾಗಿರುತ್ತದೆ. ಪುಸ್ತಕಗಳಿಂದ ಮುಖ್ಯ ಗ್ರಂಥಪಾಲಕರ ಅನುಮ ತಿಇಲ್ಲದೇ ಟ್ರೇಸಿಂಗ್ ಮಾಡುವಂತಿಲ್ಲ. ಗ್ರಂಥಾಲಯದಿಂದ ಹೊರಹೋಗುವ ಮೊದಲು ಪರಾಮರ್ಶನಕ್ಕಾಗಿ ಪಡೆದ ಪುಸ್ತಕಗಳನ್ನು ಹಿಂದಿರುಗಿಸತಕ್ಕದ್ದು.
 25. ಗ್ರಂಥಾಲಯದ ಕೆಲಸ ಸಸೂತ್ರವಾಗಿ ನಡೆಯಲು ಗ್ರಂಥಾಲಯದ ಸದಸ್ಯರುಗಳು ಗ್ರಂಥಾಲಯದನಿಯಮಗಳಿಗೆ ಬದ್ಧರಾಗಿರತಕ್ಕದ್ದು.
 26. ಗ್ರಂಥಾಲಯದ ಸದಸ್ಯರು ಗ್ರಂಥಾಲಯಕ್ಕೆ ಬರುವಾಗ ಗುರುತಿನ ಚೀಟಿಯನ್ನು ತರತಕ್ಕದ್ದು.
 27. ಗ್ರಂಥಾಲಯದ ಸದಸ್ಯರುಗಳು ತಮ್ಮ ಬ್ಯಾಗ್ ಮತ್ತು ಇತರೇ ವಸ್ತುಗಳನ್ನು ಗ್ರಂಥಾಲಯದ ಕೌಂಟರ್‍ಲ್ಲಿ ಇರಿಸಿ ಟೋಕನ್ ಪಡೆಯತಕ್ಕದ್ದು.
 28. ಗ್ರಂಥಾಲಯದ ಸದಸ್ಯರುಗಳು ಗ್ರಂಥಾಲಯಕ್ಕೆ ಬರುವಾಗತಮ್ಮೊಂದಿಗೆಯಾವುದೇ ಬೆಲೆಬಾಳುವ ವಸ್ತುಗಳು, ಒಡವೆಗಳು, ಹಣ, ಮೊಬೈಲ್ ದೂರವಾಣಿಗಳು ಮತ್ತು ಇತರೇ ಉಪಕರಣಗಳನ್ನು ತರಬಾರದು.
 29. ಗ್ರಂಥಾಲಯದ ಕೌಂಟರ್‍ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಸದಸ್ಯರಗುರುತಿನ ಚೀಟಿಗಳನ್ನ ಪರಿಶೀಲಿಸಲು ಅಧಿಕಾರ ಉಳ್ಳವರಾಗಿರುತ್ತಾರೆ.
 30. ಗ್ರಂಥಾಲಯದ ಸದಸ್ಯರುಗಳು ಗ್ರಂಥಾಲಯದ ಪ್ರವೇಶದ್ವಾರದಲ್ಲಿ ಇರಿಸಲಾಗಿರುವ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ ನಂತರಗ್ರಂಥಾಲಯದ ಒಳಗೆ ಪ್ರವೇಶಿಸತಕ್ಕದ್ದು.
 31. ಸದಸ್ಯರುಗಳ ವೈಯುಕ್ತಿಕ ಪುಸ್ತಕಗಳು /ನಿಯತಕಾಲಿಕಗಳು/ ಮ್ಯಾಗಝೀನ್‍ಗಳು ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಗ್ರಂಥಾಲಯದ ಒಳಗೆ ತರುವಂತಿಲ್ಲ.
 32. ಗ್ರಂಥಾಲಯದ ಒಳಗೆ ಸದಸ್ಯರುಗಳು ಮೆಲುದನಿಯಲ್ಲಿ ಮಾತನಾಡತಕ್ಕದ್ದು.
 33. ಓದುಗರು ಪುಸ್ತಕಗಳನ್ನು ಜೆರಾಕ್ಷ್ ಮಾಡಿಸಲು ತೆಗೆದುಕೊಂಡು ಹೋಗುವಾಗ ಪುಸ್ತಕದ ಯಾವುದೇ ಪುಟಗಳನ್ನು ಮಡಿಸಬಾರದು. ಬದಲಾಗಿ ಬಾವುಟಗಳನ್ನು ಬಳಲಸು ಕೋರಿದೆ.
 34. ಗ್ರಂಥಾಲಯ ಪ್ರವೇಶಿಸಿದ ಕೂಡಲೇ ಸದಸ್ಯರು ತಮ್ಮ ಮೊಬೈಲ್ ದೂರವಾಣಿಗಳನ್ನು ಸ್ವಿಚ್ ಆಫ್ ಮಾಡತಕ್ಕದ್ದು.
 35. ಗ್ರಂಥಾಲಯದಲ್ಲಿ ಯಾವುದೇ ತ್ಯಾಜ್ಯಗಳನ್ನು ಬಿಡಾಡಲು ಕಸದ ಡಬ್ಬಿಗಳನ್ನು ಬಳಸಿರಿ.
 36. ಪುಸ್ತಕದ ಪುಟಗಳನ್ನು ಹರಿಯಬಾರದು. ಬದಲಾಗಿ ಪುಸ್ತಕದ ಜೆರಾಕ್ಷ್ ಪ್ರತಿಗಳನ್ನು ಪಡೆಯಲು ಕೋರಿದೆ.
 37. ಪುಸ್ತಕಗಳನ್ನು ಯಾವುದೇ ಸಂದರ್ಭದಲ್ಲಿಯೂ ಸ್ಥಳಾಂತರ ಮಾಡಬಾರದು.
 38. ಗ್ರಂಥಾಲಯದ ಪರಿಸರವನ್ನು ಶುಭ್ರವಾಗಿಡಲು ಸಹಕರಿಸತಕ್ಕದ್ದು.
 39. ಓದುಗರು ಪುಸ್ತಕಗಳನ್ನು ಓದಿದ ನಂತರ ಪುಸ್ತಕವನ್ನು ಮೇಜಿನ ಮೇಲೆಯೇ ಬಿಟ್ಟುಹೋಗಬೇಕು.
 40. ಸದಸ್ಯರು ತಮ್ಮ ಹಳೆಯ ಎರವಲು ಚೀಟಿಗಳನ್ನು ಹಿಂದಿರುಗಿಸಿ ಸದಸ್ಯತ್ವವನ್ನು ನವೀಕರಿಸಿ ಹೊಸ ಎರವಲು ಚೀಟಿಗಳನ್ನು ಪಡೆಯಬೇಕು.
 41. ಗ್ರಂಥಾಲಯದ ಭದ್ರತಾ ಸಿಬ್ಬಂದಿಗಳು ಕೇಳಿದಾಗ ಸದಸ್ಯರುಗಳು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು.
 42. ಯಾವುದೇ ಮಾರ್ಗದರ್ಶನ ಅಥವಾ ಸಹಾಯಕ್ಕಾಗಿ ಗ್ರಂಥಾಲಯದ ಸಿಬ್ಬಂದಿಗಳನ್ನು ಸಂಪರ್ಕಿಸಲು ಕೋರಿದೆ.
 43. ಓದುಗರ ಸಹಕಾರವನ್ನುಕೋರಿದೆ.

ಎಲ್ಲಾ ಕಾರ್ಯನಿರತ ದಿನಗಳಲ್ಲಿ ಬೆಳಗ್ಗೆ 9.00 ರಿಂದ ಸಾಯಂಕಾಲ 6.00 ರವರೆಗೆ

ಕ್ರಮ ಸಂಖ್ಯೆ  ಹೆಸರು ಪದ ನಾಮ ಮತ್ತು ವಿವರ ಭಾವ ಚಿತ್ರ
1 ಶ್ರೀ ನಿಂಗರಾಜ ಈ.ಸಿ. ಮುಖ್ಯ ಗ್ರಂಥಪಾಲಕರು

ದೂರವಾಣಿ: 9342184789,

ಇಮೇಲ್ : librarian.ati@gmail.com

2 ಶ್ರೀ ವರದರಾಜು ಹಿರಿಯ ಗ್ರಂಥಪಾಲಕರು

ದೂರವಾಣಿ: 9741187858

ಇಮೇಲ್: hsvarda@gmail.com

3 ಶ್ರೀ ರಾಘವೇಂದ್ರ ಹೆಚ್. ಎನ್. ಗ್ರಂಥಾಲಯ ಸಹಾಯಕರು

ದೂರವಾಣಿ: 9481841233

Font Resize
Contrast