ಸಂಸ್ಥೆಯ ಕಬಿನಿ ವಸತಿ ನಿಲಯದಲ್ಲಿನ ನೆಲಮಹಡಿಯಲ್ಲಿ ಜಿಮ್, ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನ್ನಿಸ್, ಕೇರಮ್ ಬೋರ್ಡ್ ಮತ್ತು ಚದುರಂಗ ಆಟಗಳನ್ನು ಆಡಲು ಸೌಲಭ್ಯವನ್ನು  ಪ್ರಶಿಕ್ಷಣಾರ್ಥಿಗಳಿಗೆ ಕಲ್ಪಿಸಲಾಗಿದೆ.

ಸಂಸ್ಥೆಯ ಕ್ರೀಡಾ ಸಮುಚ್ಛಯದಲ್ಲಿಯೂ ಸಹ ಜಿಮ್, ಟೇಬಲ್ ಟೆನ್ನಿಸ್, ಕೇರಮ್ , ಚದುರಂಗ ಮತ್ತು ಬಾಸ್ಕೆಟ್ ಬಾಲ್ ಆಟಗಳನ್ನು ಆಡಲು ಸೌಲಭ್ಯವನ್ನು ಪ್ರಶಿಕ್ಷಣಾರ್ಥಿಗಳಿಗೆ ಕಲ್ಪಿಸಲಾಗಿದೆ. ಒಳಾಂಗಣ ಕ್ರೀಡೆಗಳನ್ನು ಹೊರತುಪಡಿಸಿ, ಹೊರಾಂಗಣ ಕ್ರೀಡೆಗಳಾದ ಕ್ರಿಕೆಟ್, ವಾಲಿ ಬಾಲ್, ಶಾಟ್ ಪುಟ್, ಟೆನ್ನಿಸ್, ಫುಟ್ ಬಾಲ್, ಥ್ರೋ ಬಾಲ್, ಹ್ಯಾಂಡ್ ಬಾಲ್ , ಜಾವಲಿನ್ ಗಳನ್ನು ಆಡಲು ಸುಸಜ್ಜಿತವಾದ ಮೈದಾನವು ಸಂಸ್ಥೆಯ ಆವರಣದಲ್ಲಿದೆ.

ಕ್ರೀಡೆಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಸಂಸ್ಥೆಯಿಂದಲೇ ಒದಗಿಸಲಾಗುತ್ತಿದೆ.

yoga

ಆಡಳಿತ ತರಬೇತಿ ಸಂಸ್ಥೆಗೆ ಬರುವ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿ ನಿತ್ಯ ಯೋಗ ತರಗತಿಗಳನ್ನು ಆಯೋಜಿಸಲಾಗಿದೆ. ಯೋಗ ತರಬೇತಿಯಲ್ಲಿ ಒತ್ತಡವನ್ನು ತಡೆಯುವಲ್ಲಿ ಹಾಗು  ಉತ್ತಮ ಮಟ್ಟದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಆಸನಗಳು, ಪ್ರಾಣಯಾಮ ಹಾಗೂ ಸೂಯ೯ನಮಸ್ಕಾರ ವನ್ನು ಹೇಳಿ ಕೊಡಲಾಗುತ್ತದೆ.

*ಪ್ರತೀ ನಿತ್ಯ ಬೆಳಿಗ್ಗೆ 6.30 ರಿಂದ 7.30ರವರೆಗೆ ಆವರಣದಲ್ಲಿರುವ ಕ್ರೀಡಾ ಸಮುಚ್ಚಯದಲ್ಲಿ ನಡೆಸಲಾಗುತ್ತದೆ.

*ಪ್ರತಿಯೊಬ್ಬರು ಬಿಳಿ ಬಣ್ಣದ ಕ್ರೀಡಾ ಉಡುಪುಗಳನ್ನು ಧರಿಸಿ ಯೋಗ ತರಗತಿಗೆ ಹಾಜರಾಗಬೇಕು.

ಎಲ್ಲಾ ಕಾರ್ಯನಿರತ ದಿನಗಳಲ್ಲಿ

ಬೆಳಗ್ಗೆ 6.00 ರಿಂದ  10.00 ರ ವರೆಗೆ

ಸಾಯಂಕಾಲ 17.00 ರಿಂದ  21.00 ರ ವರೆಗೆ

Font Resize
Contrast