ಆಡಳಿತ ತರಬೇತಿ ಸಂಸ್ಥೆಯು ಕರ್ನಾಟಕ ಸರ್ಕಾರದ ಅತ್ಯುನ್ನತ ತರಬೇತಿ ಸಂಸ್ಥೆಯಾಗಿದ್ದು, ಇದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 38 ಎಕರೆಗಳ ವಿಸ್ತೀರ್ಣದಲ್ಲಿ ಹರಡಿದೆ. ರಾಜ್ಯ ನಗರಾಭಿವೃದ್ಧಿ ಸಂಸ್ಧೆ ಮತ್ತು ಅಬ್ದುಲ್ ನಜೀ಼ರ್ ಸಾಬ್‍ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಧೆಗಳು ಸಹ ಆಡಳಿತ ತರಬೇತಿ ಸಂಸ್ಧೆಯ ಆವರಣದಲ್ಲಿರುತ್ತದೆ.

ಈ ಸಂಸ್ಧೆಯು ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವಾ ವರ್ಗದ ಅಧಿಕಾರಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಾಗಿದ್ದು, ಇದು ರಾಜ್ಯ ನಾಗರೀಕ ಸೇವಾ ವೃಂದದ ಪತ್ರಾಂಕಿತ ಅಧಿಕಾರಿಗಳಿಗೆ ವೃತ್ತಿ ಬುನಾದಿ ತರಬೇತಿಯನ್ನು, ಕರ್ನಾಟಕ ಕೇಡರ್ ಗೆ ಆಯ್ಕೆಯಾದ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಅನ್ಯ ಸೇವಾ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ಬುನಾದಿ ತರಬೇತಿಯನ್ನು ಹಾಗೂ ಹಿರಿಯ ಅಧಿಕಾರಿಗಳಿಗೆ ಪುನರ್ ಮನನ ತರಬೇತಿಯನ್ನು ನೀಡುವ ಮೂಲಕ ಆಡಳಿತದ  ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ  ಇವುಗಳಲ್ಲದೆ  ಲಿಂಗಸಮಸ್ಯೆ, ಹಣಕಾಸು ನಿರ್ವಹಣೆ, ಕಾನೂನು ಸಮಸ್ಯೆಗಳು, ಗಣಕಯಂತ್ರ ಅಪ್ಲೀಕೇಷನ್‍ಗಳ ಬಗ್ಗೆಯು ತರಬೇತಿಗಳನ್ನು ಏರ್ಪಡಿಸಲಾಗುತ್ತಿದೆ. ಆಡಳಿತ ತರಬೇತಿ ಸಂಸ್ಥೆಯು ಮುಖ್ಯವಾಗಿ ಗುಂಪು ‘ಎ’ ಮತ್ತು ‘ಬಿ’ ವೃಂದದ ಅಧಿಕಾರಿಗಳಿಗೆ ತರಬೇತಿ ಏರ್ಪಡಿಸುತ್ತಿದ್ದು, ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ಆಯಾಯ ಜಿಲ್ಲೆಯ ಗ್ರೂಪ್ ‘ಸಿ’ ಮತ್ತು ‘ಡಿ’ ವೃಂದದ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

Font Resize
Contrast