sjc-banner

ರಾಜ್ಯದಲ್ಲಿ ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗ, ಹಿಂದುಳಿದ ವರ್ಗ, ಬುಡಕಟ್ಟು ಸಮುದಾಯ, ವಿಕಲಚೇತನರು, ತೃತೀಯ ಲಿಂಗಿಗಳ ಆರ್ಥಿಕ ಸಬಲೀಕರಣದ ಚಟುಚಟಿಕೆಗಳನ್ನು ಅನುಷ್ಠಾನಗೊಳಿಸುವುದಕ್ಕೆ  ಹಾಗೂ ಆರ್ಥಿಕವಾಗಿ ದುರ್ಬಲವರ್ಗದವರ ಅಭಿವೃದ್ಧಿಗಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಆಧಾರಿತ ಸಮಾಜದ ಆಶಯಗಳನ್ನು ಹೊಂದಿದ ಸಮಾಜ ನಿರ್ಮಾಣವು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆ ಹಾಗೂ ಸಂಸ್ಥೆಗಳಿಗೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಹಾಗೂ ಆರ್ಥಿಕ/ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಮತ್ತು ನಿರೀಕ್ಷಿತ ಮಟ್ಟದಲ್ಲಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತರಬೇತಿ ನೀಡಿ, ಅರಿವು ಮೂಡಿಸುವುದರ ಅಗತ್ಯತೆ ಕಂಡುಬಂದಿದೆ. ಈ ಸಂಬಂಧ ಸರ್ಕಾರದ ಅಧಿಕಾರಿಗಳಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕುರಿತಾಗಿ ಸಂಶೋಧನೆ ಕೈಗೊಳ್ಳುವ ಸಲುವಾಗಿ ಆಡಳಿತ ತರಬೇತಿ ಸಂಸ್ಥೆಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಿದೆ.

ಈ ಕೇಂದ್ರದ ಮೂಲಕ ಗುರಿ ನಿರ್ದಿಷ್ಟ ಗುಂಪುಗಳಿಗೆ ದೊರೆಯಬೇಕಿರುವ ಕಾನೂನಾತ್ಮಕ ಅಂಶಗಳು, ಸೌಲಭ್ಯಗಳು, ಮತ್ತಿತರ ಆರ್ಥಿಕ ಸೌಲಭ್ಯಗಳ ಅಸಮರ್ಪಕ ಅನುಷ್ಠಾನದ ಕಾರಣದಿಂದಾಗಿ ಸಾಮಾಜಿಕ ಅಸಮಾನತೆಯು ಮುಂದುವರೆದಿರುವುದನ್ನು ಅರಿತುಕೊಳ್ಳಲು ಒತ್ತುನೀಡುತ್ತದೆ. ಇದರಿಂದಾಗಿಯೇ ಅಪಾರ ಮಾನವ ಸಂಪನ್ಮೂಲದ ಸದ್ಬಳಕೆಯಾಗದೇ ಸಮಾಜದಲ್ಲಿ ತಾರತಮ್ಯ ಬೆಳೆಯಲು ಕಾರಣವಾಗುತ್ತಿದೆ. ಇದನ್ನು ಸರಿದೂಗಿಸುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಉಳಿಸುವುದು ಅಗತ್ಯವಿದೆ ಎಂಬುದನ್ನು ಮತ್ತು ಆರ್ಥಿಕ ಸುಭದ್ರತೆಯ ವಿಧಾನಗಳಲ್ಲಿ ಇರುವ ವ್ಯತ್ಯಾಸಗಳೇ ಆರ್ಥಿಕ ಅಸಮಾನತೆಯನ್ನು ಉಂಟುಮಾಡುತ್ತದೆ ಎಂಬ ಅರಿವು ತರುವುದು ಮಹತ್ವದ್ದಾಗಿದೆ. ಆದಾಯ, ಶಿಕ್ಷಣ ಮತ್ತು ವೃತ್ತಿಯ ಅನುಸಾರ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಸಾಮಾಜಿಕ-ಆರ್ಥಿಕ ಮಟ್ಟವನ್ನು ಇತರ ಗುಂಪಿನೊಂದಿಗೆ ಹೋಲಿಸಿ, ಗುರುತಿಸಿ, ಅವುಗಳನ್ನು ಸರಿದೂಗಿಸುವುದರ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರವು ಮನದಟ್ಟುಮಾಡಿಕೊಡಲಿದೆ.

ಕೇಂದ್ರದ ಅವಶ್ಯಕತೆ:

ಸಾಮಾಜಿಕ ನ್ಯಾಯ ಮತ್ತು ಸಮಾನತೆ ಒಂದೇ ನಾಣ್ಯದ ಎರಡು ಮುಖಗಳು, ಇವು ಒಂದು ದೇಶದ ಸಾಮಾಜಿಕ-ಆರ್ಥಿಕ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತಾ, ವೈವಿಧ್ಯತೆ ಮತ್ತು ಸಮಾನತೆ ಹೊಂದುವ ಸಮಾಜವನ್ನು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆರ್ಥಿಕ ನೆರವಿನೊಂದಿಗೆ 2019 ರಿಂದ ಆರಂಭಿಸಲಾಗಿದೆ. ತಾರತಮ್ಯ, ಅಸಮಾನತೆ, ದೌರ್ಜನ್ಯಗಳಂತಹ ಸಾಮಾಜಿಕ ಪಿಡುಗುಗಳ ವಿಷಯಗಳ ಬಗ್ಗೆ, ಅರಿವು ತರುವುದರೊಂದಿಗೆ, ಸಮಾಜದ ದುರ್ಬಲ ವರ್ಗಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಆಶಯಗಳನ್ನು ಸಾಕಾರಗೊಳಿಸುವುದಕ್ಕೆ ಈ ಕೇಂದ್ರವು ಬದ್ಧವಾಗಿದೆ.

ಒಂದು ನ್ಯಾಯಸಮ್ಮತ ಸಮಾಜವನ್ನು ಸ್ಥಾಪಿಸಲು, ಎಲ್ಲ ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯನ್ನು ಒಳಗೊಳ್ಳುವಂತೆ ಭಾರತದ ಸಂವಿಧಾನದಲ್ಲಿ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಸಂವಿಧಾನದ ಈ ಷರತ್ತುಗಳನ್ನೇ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಕಾರ್ಯಗತಗೊಳಿಸಿ, ನಿರೀಕ್ಷಿತ ಫಲಿತಾಂಶವನ್ನು ಹೊರತರುವುದು ಅತ್ಯಗತ್ಯವಾಗಿದೆ.  ಈ ಅಗತ್ಯತೆಯ ಈಡೇರಿಕೆಗಾಗಿ ಈ ಕೇಂದ್ರವನ್ನು ಆಡಳಿತ ತರಬೇತಿ ಸಂಸ್ಥೆಯಲ್ಲಿ ಆರಂಭಿಸಲಾಗಿದೆ.

ದೃಷ್ಠಿ:

  ಆಡಳಿತ ತರಬೇತಿ ಕೇಂದ್ರದ ಆಶ್ರಯದಲ್ಲಿರುವ ಈ ಕೇಂದ್ರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಸಾಮಾಜಿಕ-ಆರ್ಥಿಕ ವಿಷಯಗಳ ಸವಾಲುಗಳ ಬಗ್ಗೆ ಕಾರ್ಯನೀತಿ (ಠಿoಟiಛಿಥಿ) ನಿರೂಪಿಸುವವರೆಗೆ, ಯೋಜನೆ ಸಿದ್ಧಗೊಳಿಸುವವರೆಗೆ, ಅನುಷ್ಠಾನಕಾರರಿಗೆ ತರಬೇತಿ ನೀಡುವುದು ಮತ್ತು ವಿಭಿನ್ನ ದೃಷ್ಠಿಕೋನ ಹೊಂದುವಂತೆ ಸಜ್ಜುಗೊಳಿಸಬೇಕಾಗುತ್ತದೆ. ಸಂಶೋಧನೆಗಳನ್ನು ಒಳಗೊಂಡಂತೆ ಪ.ಜಾ., ಪ.ಪಂ., ಮತ್ತು ಇತರೆ ಹಿಂದುಳಿದ ವರ್ಗ, ಮಹಿಳೆ ಮತ್ತು ಮಕ್ಕಳು, ತೃತೀಯ ಲಿಂಗಿಗಳು, ವಿಕಲಚೇತನರು ಮತ್ತು ಇತರ ಉಪಗುಂಪುಗಳಂತಹ ದುರ್ಬಲವರ್ಗಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಸಜ್ಜುಗೊಳಿಸುತ್ತದೆ. ಒಂದು ಆದರ ಪೂರ್ವಕ ಸಂಸ್ಕøತಿಯ ನಿರ್ಮಾಣ; ಮಾನವ ಹಕ್ಕುಗಳು ಮತ್ತು ಎಲ್ಲ ವೈವಿಧ್ಯತೆಗಳನ್ನೊಳಗೊಂಡ ಸಮಾಜದಲ್ಲಿ ಅಸಮಾನತೆ, ಜಾತೀಯತೆ ಮೂಢನಂಬಿಕೆ, ಹಿಂಸೆ, ಅನ್ಯಾಯ, ಬೇಧಭಾವ, ಪೂರ್ವಗ್ರಹ, ಪಕ್ಷಪಾತಗಳಿಲ್ಲದ ಸಮಾಜದ ಸ್ಥಾಪನೆಗೆ ಎಲ್ಲರನ್ನೂ ಒಳಗೊಳ್ಳುವ ವಿಶಾಲದೃಷ್ಠಿಕೋನದೊಂದಿಗೆ ಕಾರ್ಯನಿರತವಾಗುವ ಆಶಯವನ್ನು ಹೊಂದಿದೆ.

ಉದ್ದೇಶಗಳು:

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿ ಮತ್ತು ಇತರ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎ, ಬಿ, ಸಿ ಮತ್ತು ಡಿ ಶ್ರೇಣಿಯ ಅಧಿಕಾರಿ/ನೌಕರರಿಗೆ ಪ.ಜಾ/ಪ.ಪಂ ಗಳ ಸರ್ವತೋಮುಖ ಬೆಳವಣಿಗೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಅರಿವು ಮತ್ತು ಸಾಮಥ್ರ್ಯಾಭಿವೃದ್ಧಿ ಸಾಧಿಸುವುದು ಈ ಕೇಂದ್ರದ ತರಬೇತಿಯ ಪ್ರಧಾನ ಉದ್ದೇಶವಾಗಿರುತ್ತದೆ.

  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಮಹಿಳೆಯರು/ ದಮನಿತರು/ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಇರುವ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಕಾನೂನು ವಿಷಯಗಳ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ಸಾಮಥ್ರ್ಯಾಭಿವೃದ್ಧಿ ನಿರ್ಮಾಣ ಆಯೋಜನೆ.
  • ವಿಶೇಷ ಪರಿಣಿತರಿಂದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತಾಗಿ ವಿಶೇಷ ಕಾರ್ಯಾಗಾರ, ವಿಚಾರ ಸಂಕಿರಣ/ಸಮ್ಮೇಳನಗಳನ್ನು ಆಯೋಜಿಸುವುದು.
  • ಕೇಂದ್ರವು ಸರ್ಕಾರದ ಯೋಜನೆ ಮತ್ತು ಕಾನೂನು ವಿಷಯಗಳ ಕುರಿತಾಗಿ ತಾಂತ್ರಿಕ ಸಲಹೆಯನ್ನು ನೀಡುವ ಮಾರ್ಗದರ್ಶಕ ಕೇಂದ್ರವಾಗುವುದು.
  • ಕಾನೂನು ಪ್ರಾಧಿಕಾರ ಸಂಸ್ಥೆಗಳೊಂದಿಗೆ ಸಂವಹನ ಹೊಂದುವುದು.
  • ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣ ನಿರ್ವಹಣೆಗೆ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವುದು.
  • 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿಗಳ ಗುರಿ ಸಾಧನೆಗಾಗಿ(Sustainable Development Goalss) ಸರ್ಕಾರಕ್ಕೆ ಅಗತ್ಯತೆಯ ಅನುಗುಣವಾಗಿ ತಾಂತ್ರಿಕ ನೆರವನ್ನು ನೀಡಲಾಗುವುದು
ಕ್ರಮ ಸಂಖ್ಯೆ ಯೋಜನಾ ವರದಿಯ ಶೀರ್ಷಿಕೆ ಲಭ್ಯತೆ
1 ಕ್ರಿಯಾ ಯೋಜನೆ 2019-20 ವೀಕ್ಷಿಸಿ / ಡೌನ್ಲೋಡ್
2 ಕ್ರಿಯಾ ಯೋಜನೆ 2020-21 ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಸಂಶೋಧನಾ ಪ್ರಸ್ತಾವನೆಯ ಶೀರ್ಷಿಕೆ ಲಭ್ಯತೆ
1 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ಪ್ರತಿಬಂಧ) ಕಾಯ್ದೆಯ ಸಾಮಾಜಿಕ ಮತ್ತು ಕಾನೂನು ಆಯಾಮಗಳು- ಮೈಸೂರು ಜಿಲ್ಲೆಯ ಒಂದು ಅಧ್ಯಯನ ವೀಕ್ಷಿಸಿ / ಡೌನ್ಲೋಡ್
null

ಡಾ. ಎಸ್. ತುಕಾರಾಮ್

ಪದನಾಮ:
ಬೋಧಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎ. ಪಿಹೆಚ್.ಡಿ.,
ತರಬೇತಿ
ಮೆಟೀರಿಯಲ್ ಪ್ರಿಪರೇಷನ್ ಮಾಧ್ಯಮ ವಿನ್ಯಾಸ

ಸಂಪರ್ಕ:
9731367262
strkaruna@gmail.com

null

ಡಾ. ಎಸ್. ಎನ್. ಫಾತೀಮಾ

ಪದನಾಮ:
ಬೋಧಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎಸ್.ಡಬ್ಲೂ(ಚಿನ್ನದ ಪದಕ)
ಪಿಹೆಚ್.ಡಿ.,( ಅಭಿವೃದ್ಧಿ ಅಧ್ಯಯನ),
ಲಿಂಗ ಮತ್ತು ಮಹಿಳಾ ಅಧ್ಯಯನ, ಡಿಸೆಂಟ್ರಲೈಜೇಷನ್, ಗವರ್ನೆನ್ಸ್, ಲೈವ್ಲಿ ಹುಡ್, ಗ್ರಾಮೀಣಾಭಿವೃದ್ಧಿ, ಮಕ್ಕಳ ಸಂರಕ್ಷಣೆ, ಸಾಫ್ಟ್ ಸ್ಕಿಲ್ಸ್ ಮತ್ತು ಸಮುದಾಯ ಅಭಿವೃದ್ಧಿ

ಸಂಪರ್ಕ:
9901675858
Syeda.fathima@gmail.com

null

ರವಿಕುಮಾರ. ಬಿ

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎ, ಎಂಫಿಲ್, (ಪಿಹೆಚ್.ಡಿ),.
ಗ್ರಾಮೀಣಾಭಿವೃದ್ಧಿ, ಮಹಿಳಾ ಅಧ್ಯಯನ, ಲಿಂಗಾಧಾರಿತ ಲೆಕ್ಕಪರಿಶೋಧನೆ, ಮಹಿಳಾ ಉದ್ದೇಶಿತ ಆಯವ್ಯಯ

ಸಂಪರ್ಕ:
8867022012
bravikumara28@gmail.com

null

ಡಾ. ಆರ್. ರವಿ

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎ, ಪಿಹೆಚ್.ಡಿ.,

ಸಂಪರ್ಕ:
9481034892
drrravi2012@gmail.com

null

ಸಂಜೀವ್ ನಾಯ್ಕ್. ಎಲ್

ಪದನಾಮ:
ಟೆಕ್ನಿಕಲ್ ಅಸಿಸ್ಟೆಂಟ್ (ಐಸಿಟಿ)

ವಿದ್ಯಾರ್ಹತೆ  ಮತ್ತು ವಿಶೇಷತೆ:
ಬಿಇ (ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್)

ಸಂಪರ್ಕ:
8867337396
Sanjeevnk45@gmail.com

null

ಕವಿತ. ಕೆ

ಪದನಾಮ:
ಟೆಕ್ನಿಕಲ್ ಅಸಿಸ್ಟೆಂಟ್ (ಡಾಕ್ಯೂಮೆಂಟೇಶನ್ & ಪಬ್ಲಿಕೇಷನ್)

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂಡಿಎಂ, ಎಂಕಾಂ, ಪಿಜಿಡಿಹೆಚ್ಆರ್ ಎಂ
ದಾಖಲೀಕರಣ ಮತ್ತು ವರದಿ, ತರಬೇತಿ, ಯುವ ಅಭಿವೃದ್ಧಿ, ಲೈವ್ಲಿಹುಡ್, ಸಮುದಾಯ ಅಭಿವೃದ್ಧಿ, ಲಿಂಗ ಮತ್ತು ಮಹಿಳಾ ಅಧ್ಯಯನ, ಬುಡಕಟ್ಟು ಸಮುದಾಯ ಅಭಿವೃದ್ಧಿ, ಅಭಿವೃದ್ಧಿ ಅಧ್ಯಯನ, ಶೈಕ್ಷಣಿಕ ಸಮಾಲೋಚನೆ, ಕಾರ್ಯಕ್ರಮ ನಿರೂಪಣೆ

ಸಂಪರ್ಕ:
7676462553
Kavitha.k00749@gmail.com

null

ಅರುಣ್. ಕೆ.ಎಸ್

ಪದನಾಮ:
ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎಸ್ಸಿ (ರಸಾಯನಶಾಸ್ತ್ರ)

ಸಂಪರ್ಕ:
7022222241
arunsampathraj@gmail.com

+ ಪರಿಚಯ

+ ದೃಷ್ಠಿ & ಉದ್ದೇಶಗಳು

+ ಕ್ರಿಯಾ ಯೋಜನೆ
ಕ್ರಮ ಸಂಖ್ಯೆ ಯೋಜನಾ ವರದಿಯ ಶೀರ್ಷಿಕೆ ಲಭ್ಯತೆ
1 ಕ್ರಿಯಾ ಯೋಜನೆ 2019-20 ವೀಕ್ಷಿಸಿ / ಡೌನ್ಲೋಡ್
2 ಕ್ರಿಯಾ ಯೋಜನೆ 2020-21 ವೀಕ್ಷಿಸಿ / ಡೌನ್ಲೋಡ್
+ ಸಂಶೋಧನೆ ಮತ್ತು ದಾಖಲಿಕರಣ
ಕ್ರಮ ಸಂಖ್ಯೆ ಸಂಶೋಧನಾ ಪ್ರಸ್ತಾವನೆಯ ಶೀರ್ಷಿಕೆ ಲಭ್ಯತೆ
1 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ಪ್ರತಿಬಂಧ) ಕಾಯ್ದೆಯ ಸಾಮಾಜಿಕ ಮತ್ತು ಕಾನೂನು ಆಯಾಮಗಳು- ಮೈಸೂರು ಜಿಲ್ಲೆಯ ಒಂದು ಅಧ್ಯಯನ ವೀಕ್ಷಿಸಿ / ಡೌನ್ಲೋಡ್
+ ಬೋಧಕರು ಮತ್ತು ಸಿಬ್ಬಂಧಿ ವರ್ಗ
null

ಡಾ. ಎಸ್. ತುಕಾರಾಮ್

ಪದನಾಮ:
ಬೋಧಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎ. ಪಿಹೆಚ್.ಡಿ.,
ತರಬೇತಿ
ಮೆಟೀರಿಯಲ್ ಪ್ರಿಪರೇಷನ್ ಮಾಧ್ಯಮ ವಿನ್ಯಾಸ

ಸಂಪರ್ಕ:
9731367262
strkaruna@gmail.com

null

ಡಾ. ಎಸ್. ಎನ್. ಫಾತೀಮಾ

ಪದನಾಮ:
ಬೋಧಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎಸ್.ಡಬ್ಲೂ(ಚಿನ್ನದ ಪದಕ)
ಪಿಹೆಚ್.ಡಿ.,( ಅಭಿವೃದ್ಧಿ ಅಧ್ಯಯನ),
ಲಿಂಗ ಮತ್ತು ಮಹಿಳಾ ಅಧ್ಯಯನ, ಡಿಸೆಂಟ್ರಲೈಜೇಷನ್, ಗವರ್ನೆನ್ಸ್, ಲೈವ್ಲಿ ಹುಡ್, ಗ್ರಾಮೀಣಾಭಿವೃದ್ಧಿ, ಮಕ್ಕಳ ಸಂರಕ್ಷಣೆ, ಸಾಫ್ಟ್ ಸ್ಕಿಲ್ಸ್ ಮತ್ತು ಸಮುದಾಯ ಅಭಿವೃದ್ಧಿ

ಸಂಪರ್ಕ:
9901675858
Syeda.fathima@gmail.com

null

ರವಿಕುಮಾರ. ಬಿ

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎ, ಎಂಫಿಲ್, (ಪಿಹೆಚ್.ಡಿ),.
ಗ್ರಾಮೀಣಾಭಿವೃದ್ಧಿ, ಮಹಿಳಾ ಅಧ್ಯಯನ, ಲಿಂಗಾಧಾರಿತ ಲೆಕ್ಕಪರಿಶೋಧನೆ, ಮಹಿಳಾ ಉದ್ದೇಶಿತ ಆಯವ್ಯಯ

ಸಂಪರ್ಕ:
8867022012
bravikumara28@gmail.com

null

ಡಾ. ಆರ್. ರವಿ

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎ, ಪಿಹೆಚ್.ಡಿ.,

ಸಂಪರ್ಕ:
9481034892
drrravi2012@gmail.com

null

ಸಂಜೀವ್ ನಾಯ್ಕ್. ಎಲ್

ಪದನಾಮ:
ಟೆಕ್ನಿಕಲ್ ಅಸಿಸ್ಟೆಂಟ್ (ಐಸಿಟಿ)

ವಿದ್ಯಾರ್ಹತೆ  ಮತ್ತು ವಿಶೇಷತೆ:
ಬಿಇ (ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್)

ಸಂಪರ್ಕ:
8867337396
Sanjeevnk45@gmail.com

null

ಕವಿತ. ಕೆ

ಪದನಾಮ:
ಟೆಕ್ನಿಕಲ್ ಅಸಿಸ್ಟೆಂಟ್ (ಡಾಕ್ಯೂಮೆಂಟೇಶನ್ & ಪಬ್ಲಿಕೇಷನ್)

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂಡಿಎಂ, ಎಂಕಾಂ, ಪಿಜಿಡಿಹೆಚ್ಆರ್ ಎಂ
ದಾಖಲೀಕರಣ ಮತ್ತು ವರದಿ, ತರಬೇತಿ, ಯುವ ಅಭಿವೃದ್ಧಿ, ಲೈವ್ಲಿಹುಡ್, ಸಮುದಾಯ ಅಭಿವೃದ್ಧಿ, ಲಿಂಗ ಮತ್ತು ಮಹಿಳಾ ಅಧ್ಯಯನ, ಬುಡಕಟ್ಟು ಸಮುದಾಯ ಅಭಿವೃದ್ಧಿ, ಅಭಿವೃದ್ಧಿ ಅಧ್ಯಯನ, ಶೈಕ್ಷಣಿಕ ಸಮಾಲೋಚನೆ, ಕಾರ್ಯಕ್ರಮ ನಿರೂಪಣೆ

ಸಂಪರ್ಕ:
7676462553
Kavitha.k00749@gmail.com

null

ಅರುಣ್. ಕೆ.ಎಸ್

ಪದನಾಮ:
ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಎಸ್ಸಿ (ರಸಾಯನಶಾಸ್ತ್ರ)

ಸಂಪರ್ಕ:
7022222241
arunsampathraj@gmail.com

Font Resize
Contrast