hassan

ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ಹಾಸನ, ಜಿಲ್ಲಾ ತರಬೇತಿ ಸಂಸ್ಥೆಯು ಹಾಸನದ ಒಂದು ಪ್ರಮುಖ ಸರ್ಕಾರಿ ಕಛೇರಿಯಾಗಿರುತ್ತದೆ. ಇದು ಹಾಸನ ರೈಲು ನಿಲ್ದಾಣ ದಿಂದ 2.5 ಕಿ.ಮೀ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿರುತ್ತದೆ. ಸಂಸ್ಥೆಯು 2.39 ಎಕರೆ ವಿಸ್ತೀರ್ಣ ಹೊಂದಿದ್ದು ಸಂಸ್ಥೆಯ ಆವರಣದಲ್ಲಿ ಕಛೇರಿ ಕಟ್ಟಡ, ವಸತಿ ನಿಲಯದ ಕಟ್ಟಡ, ಅಧಿಕಾರಿ/ಸಿಬ್ಬಂದಿಯವರ 4 ವಸತಿ ಗೃಹಗಳಿರುವ  ಕಟ್ಟಡ ಹಾಗೂ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದ ಕಟ್ಟಡ ಹೊಂದಿರುತ್ತದೆ. ಕಛೇರಿ ಕಟ್ಟಡದಲ್ಲಿ ನೆಲ ಮಹಡಿ ಮತ್ತು ಮೊದಲನೇ ಮಹಡಿ ಹೊಂದಿದ್ದು ನೆಲ ಮಹಡಿಯಲ್ಲಿ ಪ್ರಾಚಾರ್ಯರ ಕೊಠಡಿ, ಉಪ-ಪ್ರಾಚಾರ್ಯರ ಕೊಠಡಿ, ಬೋಧಕರ ಕೊಠಡಿ, ಆಡಳಿತ ಶಾಖೆ, ರೇಕಾರ್ಡ್ ಕೊಠಡಿ, ಪ್ರತ್ಯೇಕ ಪುರುಷ ಹಾಗೂ ಮಹಿಳಾ ಶೌಚಾಲಯ ಹೊಂದಿರುತ್ತದೆ, ಮೊದಲನೇ ಮಹಡಿಯಲ್ಲಿ ಎರಡು ತರಬೇತಿ ಕೊಠಡಿ, ಗಣಕಯಂತ್ರ ಕೊಠಡಿ, ಗ್ರಂಥಾಲಯ ಕೊಠಡಿಯನ್ನು ಹೊಂದಿರುತ್ತದೆ.

ಹಾಸನ, ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ನೌಕರರಿಗೆ ವಿವಿಧ ತರಬೇತಿಯನ್ನು ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ನಿರಂತರವಾಗಿ ಸಾಂಸ್ಥಿಕ ಮತ್ತು ಪ್ರಾಯೋಜಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸರ್ಕಾರಿ ನೌಕರರಿಗೆ ಉಪಯುಕ್ತವಾದ ತರಬೇತಿಗಳನ್ನು ನೀಡಲು ಶ್ರಮಿಸಲಾಗುತ್ತಿದೆ. ವಿವಿಧ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಎಲ್ಲ ಇಲಾಖೆಯ ‘ಸಿ’ ಗುಂಪಿನ ಸಿಬ್ಬಂದಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಬೇಕಾಗಿರುವ ತರಬೇತಿಗಳನ್ನು ನೀಡಲಾಗುತ್ತಿದೆ. ಬಾಗಿಲು ಮಟ್ಟದ ತರಬೇತಿಯನ್ನು ಸಹ ನೀಡಲು ಶ್ರಮಿಸಲಾಗುತ್ತಿದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಶ್ರೀಮತಿ ಶಾಜಿಯಾ ನಾಝ್ ಪ್ರಾಚಾರ್ಯರು
2 ಶ್ರೀ ಜೆ.ಎಸ್.ನಾಗರಾಜ ಉಪ ಪ್ರಾಚಾರ್ಯರು
3 ಶ್ರೀ ಅಜ್ಮಲ್ ಪಾಷ ಬೋಧಕರು
4 ಶ್ರೀಮತಿ ಸವಿತ ಕೆ. ಎಸ್ ಬೋಧಕರು
5 ಶ್ರೀಮತಿ ಲೀಲಾವತಿ ಬಿ.ಎನ್ ಪ್ರಥಮ ದರ್ಜೆ ಸಹಾಯಕರು
6 ಖಾಲಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಖಾಲಿ ಗ್ರೂಪ್ ಡಿ
10 ಪುಟ್ಟಸ್ವಾಮಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಪ್ರಾಚಾರ್ಯರು

ಜಿಲ್ಲಾ ತರಬೇತಿ ಸಂಸ್ಥೆ,

ರವೀಂದ್ರ ನಗರ , ಎಂ ಜಿ ರಸ್ತೆ

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರ

ಹಾಸನ- 573202

ದೂರವಾಣಿ ಸಂಖ್ಯೆ:-08172 297286

ಇ-ಮೇಲ್;- dti.hsn@gmail.com

hassan
Font Resize
Contrast