shimoga

ಶಿವಮೊಗ್ಗ ಜಿಲ್ಲಾ ತರಬೇತಿ ಸಂಸ್ಥೆಯು 1975ನೇ ಸಾಲಿನಿಂದ ಪ್ರಾರಂಭವಾಗಿದ್ದು, ರೈಲು ನಿಲ್ದಾಣದಿಂದ 01ಕಿ.ಮೀ, ಕೇಂದ್ರೀಯ ಬಸ್ ನಿಲ್ದಾಣದಿಂದ 03ಕಿ.ಮೀ ಅಂತರದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಸ್ಥೆಯು ಶಿವಮೊಗ್ಗ ಜಿಲ್ಲೆಯ ಗುಂಪು ಸಿ ಮತ್ತು ಡಿ ವೃಂದದ ನೌಕರರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ವೃತ್ತಿ ಬುನಾದಿ ತರಬೇತಿ ಗುಣೋತ್ಕರ್ಷ ತರಬೇತಿಯನ್ನು ನೀಡುವ ಮೂಲಕ ಸೇವೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ.

ಇವುಗಳಲ್ಲದೇ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು/ ಅಬ್ದುಲ್ ನಜೀ಼ರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ/ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಆವರಣದಲ್ಲಿ ಸ್ಥಾಪಿತವಾಗಿರುವ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ & ಸಮಾನತೆಯ ಕೇಂದ್ರ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರ-ಕರ್ನಾಟಕ ಕೇಂದ್ರ/ ಕೋಶ/ ಇಲಾಖೆಗಳ ತರಬೇತಿಯನ್ನೂ ಸಹ ನಡೆಸಲಾಗುತ್ತಿದೆ.

e-office ತರಬೇತಿಯನ್ನು ಗುಂಪು ಎ, ಗುಂಪು ಬಿ, ಗುಂಪು ಸಿ ವೃಂದದ ಅಧಿಕಾರಿ/ ಸಿಬ್ಬಂದಿಗಳಿಗೆ ಮತ್ತು e-PAR ತರಬೇತಿಯನ್ನು ಗುಂಪು ಎ, ಗುಂಪು ಬಿ, ವೃಂದದ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ಮೂಲ ಸೌಕರ್ಯ:

ಸಂಸ್ಥೆಯ ಆಡಳಿತ ಕಟ್ಟಡದಲ್ಲಿ 2 ತರಬೇತಿ ಕೊಠಡಿಗಳು, ಒಂದು ಸಭಾಂಗಣ,ಒಂದು ಗಣಕ ಯಂತ್ರ ತರಬೇತಿ ಕೊಠಡಿ ,ಕಾರ್ಯಾಲಯ  ಒಳಗೊಂಡಿರುತ್ತದೆ. ಈ ಸಂಸ್ಥೆಯು 32 ಶಿಕ್ಷಣಾರ್ಥಿಗಳ ಉಳಿದುಕೊಳ್ಳುವ ವಸತಿ ವ್ಯವಸ್ಥೆ ಹೊಂದಿದ್ದು ದುರಸ್ತಿಯ ಅವಶ್ಯಕತೆ ಇರುತ್ತದೆ (ಹಾಸ್ಟೆಲ್‌ ನಲ್ಲಿ ಕೆಳಗಿನ ಎರಡು  ದೊಡ್ಡ ಕೊಠಡಿಗಳನ್ನು ನಾಡ ಕಛೇರಿ ನಿದಿಗೆ ಹೋಬಳಿ ) ಇವರಿಗೆ ಮಾನ್ಯ ಜಿಲ್ಲಾಧಿಕಾರಿಗಳು ನೀಡಿದ್ದು  ಶಿಕ್ಷಣಾರ್ಥಿಗಳ ವಾಸ್ತವ್ಯಕ್ಕೆ ತೊಂದರೆ ಆಗಿರುತ್ತದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಶ್ರೀ ಖಲಂಧರ್‌ ಖಾನ್‌ ಪ್ರಭಾರಿ ಪ್ರಾಚಾರ್ಯರು
2 ಶ್ರೀ ತಿಪ್ಪೂರಾವ್ ‌ ಉಪ ಪ್ರಾಚಾರ್ಯರು
3 ಶ್ರೀ ಶಾಂತಾಯ್ಯ ಬೋಧಕರು
4 ಶ್ರೀ ಗುತ್ಯಪ್ಪ  ಬಿ.ಬಿ ಬೋಧಕರು
5 ಶ್ರೀಮತಿ ಕೆ. ಪ್ರೇಮಲತಾ ಪ್ರಥಮ ದರ್ಜೆ ಸಹಾಯಕರು
6 ಶ್ರೀಮತಿ ಶಿಲ್ಪಜ್ಯೋತಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಶ್ರೀ ಸಂತೋಷ ಎಲ್ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಪ್ರಾಚಾರ್ಯರು

 ಜಿಲ್ಲಾ ತರಬೇತಿ ಸಂಸ್ಥೆ

ಕೊಪ್ಪಳ ಕೋಟೆರಸ್ತೆ

ಅಯ್ಯಪ್ಪ ದೇವಸ್ಥಾನ

ಶಿವಮೊಗ್ಗ-577202

ದೂರವಾಣಿ ಸಂಖ್ಯೆ:- 08182 223172

  ಮಿಂಚಂಚೆ: shilpajyothi73@gmail.com

shimoga
Font Resize
Contrast