sirsi

 ಜಿಲ್ಲಾ ತರಬೇತಿ ಸಂಸ್ಥೆ  ಬಗ್ಗೆ:

ಸಂಸ್ಥೆಯು ಉತ್ತರ ಕನ್ನಡ .ಜಿಲ್ಲೆಯ ಶಿರಸಿ ನಗರದಲ್ಲಿ 06-09-00 ಜಮೀನು ಹೊಂದಿದ್ದು,ಅದರಲ್ಲಿ ಸ್ವಂತ ಆಡಳಿತ ಕಟ್ಟಡ ಹಾಗೂ ವಸತಿನಿಲಯ ಕಟ್ಟಡ ಹೊಂದಿರುತ್ತದೆ. ಹಾಗೂ ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಸ್ಥೆಯು ವ್ಯವಸ್ಥಾಪಕ ಸಮಿತಿ ಹೊಂದಿರುತ್ತದೆ. ಆಡಳಿತ ಕಟ್ಟದಲ್ಲಿ ಸಭಾ ಭವನ ಕೊಠಡಿಯೊಂದಿಗೆ ಎರಡು ತರಬೇತಿ ಕೊಠಡಿಗಳು ಇದ್ದು ಪ್ರತಿ ತರಬೇತಿ ಕೊಠಡಿಯಲ್ಲಿ 30-35 ಶಿಭಿರಾರ್ಥಿಗಳಿಗೆ ಆಸನದ ವ್ಯವಸ್ಥೆ ಇರುತ್ತದೆ. ಹಾಗೂ 30 ಗಣಕ ಯಂತ್ರದೊಂದಿಗೆ ಕಂಪ್ಯೂಟರ್ ಲ್ಯಾಬ್ ಹೊಂದಿದ್ದು ಎಲ್ಲಾ ಇಲಾಖೆಯ ಸಿಬ್ಬಂದಿಗಳಿಗೆ ಬೆಸಿಕ್ ಕಂಪ್ಯೂಟರ್ ಹಾಗೂ ಇ-ಆಡಳಿತಕ್ಕೆ ಸಂಬಂಧಿಸಿದಂತೆ K-2, HRMS, e-Office, e-Procurement.

ಕುರಿತು ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಸಂಸ್ಥೆಯಲ್ಲಿ ಹೊಸದಾಗಿ ನೇಮಕಗೊಂಡ ಗ್ರೂಪ್ ಸಿ ಮತ್ತು ಡಿ ನೌಕರರಿಗೆ ಸೇವಾ/ಆಡಳಿತ/ ಹಣಕಾಸು ವಿಷಯ & ಸರ್ಕಾರದ ಇತ್ತೀಚಿನ ಕಾಯಿದೆ/ನಿಯಮ ಹಾಗೂ ವಿವಿಧ ಯೋಜನೆಗಳ ಕುರಿತು ಸಂಕ್ಷಿಪ್ತ/ವೃತ್ತಿ ಬುನಾದಿ ತರಬೇತಿಗಳನ್ನು ಹಾಗೂ ಸೇವೆಯಲ್ಲಿರುವವರಿಗೆ ಅಲ್ಪಾವಧಿ ತರಬೇತಿಗಳನ್ನು ವಾರ್ಷಿಕವಾಗಿ 40-50 ತರಬೇತಿ ಕಾರ್ಯಕ್ರಮದೊಂದಿಗೆ ಅಂದಾಜು 1000 ರಿಂದ 1300 ಸಿಬ್ಬಂದಿಗಳಿಗೆ ತರಬೇತಿ ನೀಡುವ ಗುರಿ ಹೊಂದಿರುತ್ತದೆ. ವಸತಿ ನಿಲಯ ಕಟ್ಟಡದಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳುವ ಶಿಭಿರಾರ್ಥಿಗಳಿಗೆ ವಸತಿ ಸೌಲಭ್ಯಕ್ಕಾಗಿ 13 ಕೊಠಡಿಗಳನ್ನು ಹೊಂದಿದ್ದು 30-35 ಶಿಭಿರಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಬಹುದಾಗಿರುತ್ತದೆ

ಮೂಲ ಸೌಕರ್ಯ:

ಜಿಲ್ಲಾ ತರಬೇತಿ ಸಂಸ್ಥೆ, ಶಿರಸಿ ಸ್ವಂತ ಆಡಳಿತ ಕಟ್ಟಡ ಹಾಗೂ ವಸತಿನಿಲಯ ಕಟ್ಟಡ ಹೊಂದಿರುತ್ತದೆ. ಆಡಳಿತ ಕಟ್ಟದಲ್ಲಿ ಪ್ರಾಚಾರ್ಯರ ಕೊಠಡಿ, ಆಡಳಿತ ಕೊಠಡಿ, ಗ್ರಂಥಾಲಯ ಕೊಠಡಿ, ಅಭೀಲೆಖಾಲಯ ಕೊಠಡಿ, ಸಭಾ ಭವನ ಕೊಠಡಿಯೊಂದಿಗೆ ಎರಡು ತರಬೇತಿ ಕೊಠಡಿಗಳು ಇದ್ದು, ಪ್ರತಿ ತರಬೇತಿ ಕೊಠಡಿಯಲ್ಲಿ 30-35 ಶಿಭಿರಾರ್ಥಿಗಳಿಗೆ ಆಸನದ ವ್ಯವಸ್ಥೆ ಇರುತ್ತದೆ. ಹಾಗೂ 30 ಗಣಕ ಯಂತ್ರದೊಂದಿಗೆ ಕಂಪ್ಯೂಟರ್ ಲ್ಯಾಬ್ ಹೊಂದಿರುತ್ತದೆ. ವಸತಿ ನಿಲಯ ಕಟ್ಟಡದಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳುವ ಶಿಭಿರಾರ್ಥಿಗಳಿಗೆ ವಸತಿ ಸೌಲಭ್ಯಕ್ಕಾಗಿ 13 ಕೊಠಡಿಗಳನ್ನು ಹೊಂದಿದ್ದು 30-35 ಶಿಭಿರಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಬಹುದಾಗಿರುತ್ತದೆ

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಶ್ರೀ ಜಿ.ಆರ್. ನಾಯ್ಕ ಪ್ರಾಚಾರ್ಯರು
2 ಶ್ರೀ ಎಮ್.ವ್ಹಿ.ಬರಡೋಲ ಬೋಧಕರು
3 ಶ್ರೀ ಸುರೇಶ ಬೆಲ್ಲ್ಮನೆ ಪ್ರಥಮ ದರ್ಜೆ ಸಹಾಯಕರು
4 ಶ್ರೀ ಸಾವೇರ ಲೋಪಿಸ ಗ್ರೂಪ್ ಡಿ

ಪ್ರಾಚಾರ್ಯರು

ಜಿಲ್ಲಾ ತರಬೇತಿ ಸಂಸ್ಥೆ,

ಹುಬ್ಬಳಿ ರಸ್ತೆ ಚಿಪಗಿ

ಶಿರಸಿ-581 402,

ಉತ್ತರ ಕನ್ನಡ ಜಿಲ್ಲೆ- 08384-236592

ಮಿಂಚಂಚೆ: dtisirsi-kamy@nic.in

sirsi
Font Resize
Contrast