vijayapura

ವಿಜಯಪುರ ಜಿಲ್ಲಾ ತರಬೇತಿ ಸಂಸ್ಥೆಯು 1987ನೇ ಸಾಲಿನಿಂದ ಪ್ರಾರಂಭವಾಗಿದ್ದು, ರೈಲು ನಿಲ್ದಾಣದಿಂದ  10ಕಿ.ಮೀ, ಕೇಂದ್ರೀಯ  ಬಸ್ ನಿಲ್ದಾಣದಿಂದ  05ಕಿ.ಮೀ ಅಂತರದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಸ್ಥೆಯು ವಿಜಯಪುರ ಜಿಲ್ಲೆಯ ಗುಂಪು ಸಿ ಮತ್ತು ಡಿ ವೃಂದದ ನೌಕರರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ವೃತ್ತಿ ಬುನಾದಿ ತರಬೇತಿ ಗುಣೋತ್ಕರ್ಷ ತರಬೇತಿಯನ್ನು ನೀಡುವ ಮೂಲಕ ಸೇವೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ.

ಇವುಗಳಲ್ಲದೇ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು/ ಅಬ್ದುಲ್ ನಜೀ಼ರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ/ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಆವರಣದಲ್ಲಿ ಸ್ಥಾಪಿತವಾಗಿರುವ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ & ಸಮಾನತೆಯ ಕೇಂದ್ರ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರ-ಕರ್ನಾಟಕ ಕೇಂದ್ರ/ ಕೋಶ/ ಇಲಾಖೆಗಳ ತರಬೇತಿಯನ್ನೂ ಸಹ ನಡೆಸಲಾಗುತ್ತಿದೆ.

e-office ತರಬೇತಿಯನ್ನು ಗುಂಪು ಎ, ಗುಂಪು ಬಿ, ಗುಂಪು ಸಿ ವೃಂದದ ಅಧಿಕಾರಿ/ ಸಿಬ್ಬಂದಿಗಳಿಗೆ ಮತ್ತು e-PAR ತರಬೇತಿಯನ್ನು ಗುಂಪು ಎ, ಗುಂಪು ಬಿ, ವೃಂದದ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಶ್ರೀ ವಿ ಎಸ್ ರಾಜಶೇಖರಯ್ಯ ಪ್ರಾಚಾರ್ಯರು
2 ಶ್ರೀ ಎಂ.ಎಸ್. ಪಾಟೀಲ ಉಪ ಪ್ರಾಚಾರ್ಯರು
3 ಶ್ರೀ ವ್ಹಿ.ವ್ಹಿ. ಕಮಲಾಪೂರ ಬೋಧಕರು
4 ಶ್ರೀ ಎಸ್.ಬಿ. ಕಡಿ ಬೋಧಕರು
5 ಶ್ರೀ  ಎಂ.ಎಸ್. ತಹವೀಲದಾರ ಪ್ರಥಮ ದರ್ಜೆ ಸಹಾಯಕರು
6 ಶ್ರೀ ಡಿ.ಜಿ. ಸೂರ್ಯವಂಶಿ ದ್ವಿತೀಯ ದರ್ಜೆ ಸಹಾಯಕರು
7 ಶ್ರೀ ಎಸ್. .ವೈ. ಮನಗೂಳಿ ಬೆರಳಚ್ಚುಗಾರ
8 ಖಾಲಿ ಬೆರಳಚ್ಚುಗಾರ
9 ಶ್ರೀಮತಿ ಕೆ.ಎ. ಪಾಟೀಲ ಗ್ರೂಫ್  ಡಿ
10 ಶ್ರೀ  ಎಚ್.ಆಯ್. ನಂದ್ಯಾಳ ಗ್ರೂಫ್  ಡಿ
11 ಖಾಲಿ ಗ್ರೂಫ್  ಡಿ

ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಅಫಜಲಪೂರ ಟಕ್ಕೆ ರಸ್ತೆ ವಿಜಯಪುರ – 586102

ದೂರವಾಣಿ /ಫ್ಯಾಕ್ಸ್‌ : 08352- 270004

ಅಂತರ್ಜಾಲ ನಂ: 08352-270711

ಇ-ಮೇಲ್‌  dtibijapur-kamy@nic.in

vijayapura
Font Resize
Contrast