ramanagara

ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ರಾಮನಗರ ಜಿಲ್ಲಾ ತರಬೇತಿ ಸಂಸ್ಥೆಯು ಕರ್ನಾಟಕ ರಾಜ್ಯ ಸರ್ಕಾರವು ಸ್ಥಾಪಿಸಿರುವ ಒಟ್ಟು 30 ಜಿಲ್ಲಾ ತರಬೇತಿ ಸಂಸ್ಥೆಗಳ ಪೈಕಿ ಒಂದಾಗಿದ್ದು, ಸರ್ಕಾರಿ ಆದೇಶ ಸಂಖ್ಯೆ: ಕಂಇ/27/ಭೂದಾಪು/ 2006/ದಿನಾಂಕ:21.08.2007 ರಲ್ಲಿ ಮಂಜೂರಾತಿ ಪಡೆದು, ದಿನಾಂಕ: 18.10.2007 ರಿಂದ ಕಾರ್ಯನಿರ್ವಹಣೆಯಲ್ಲಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಲ್ಲಿ ವೃತ್ತಿಜ್ಞಾನ (Knowledge) ವೃತ್ತಿ ಕೌಶಲ್ಯ (Skill) ಮತ್ತು ಉತ್ತಮ ಸೇವಾ ಮನೋಭಾವ (Attititude)  ಬೆಳವಣಿಗೆಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಡಳಿತ ಸುಧಾರಣೆಯತ್ತ ಪ್ರಯತ್ನಿಸುವ ಜವಾಬ್ದಾರಿಗಳನ್ನು ಹೊಂದಿದೆ. ಆಡಳಿತ ವಿಕೇಂದ್ರೀಕರಣವಾದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಆಡಳಿತಾತ್ಮಕ ತರಬೇತಿಗಳನ್ನು ನಡೆಸುವ ಜವಾಬ್ದಾರಿ ಹೊಂದಿದೆ.

ಈ ಸಂಸ್ಥೆಯು ಮೈಸೂರಿನಲ್ಲಿರುವ “ಆಡಳಿತ ತರಬೇತಿ ಸಂಸ್ಥೆ” ಯ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ರಾಜ್ಯ ಮಟ್ಟದಲ್ಲಿರುವ “ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಇಲಾಖೆಯ ವ್ಯಾಪ್ತಿಯೊಳಗೆ ಸೇರಲ್ಪಟ್ಟಿದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಎಂ.ಎಸ್.ನಟರಾಜ್ ಪ್ರಾಚಾರ್ಯರು
2 ಸುಮಿತ್ರ ಆರ್‌ ಉಪ ಪ್ರಾಚಾರ್ಯರು
3 ಖಾಲಿ ಬೋಧಕರು-1
4 ಖಾಲಿ ಬೋಧಕರು-2
5 ಸಿ .ಕೆ. ಸುರೇಶ್ ಪ್ರಥಮ ದರ್ಜೆ ಸಹಾಯಕರು
6 ವಿ.ಎಸ್.ನಾಗಲಿಂಗಯ್ಯ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಗ್ರೂಪ್ ಡಿ

ಪ್ರಾಚಾರ್ಯರು

      ಜಿಲ್ಲಾ ತರಬೇತಿ ಸಂಸ್ಥೆ

      #1085, ವಾರ್ಡ್ ನಂ, 2/4, ಉತ್ತರ ಬಡಾವಣೆ,

       ದ್ಯಾವರಸೇಗೌಡನದೊಡ್ಡಿ ರಸ್ತೆ.

       ಬೆಂಗಳೂರು- ಮೈಸೂರು ಮುಖ್ಯರಸ್ತೆ,

       ರಾಮನಗರ ಟೌನ್-562159

       ದೂರವಾಣಿ ಸಂಖ್ಯೆ;080-27276823

             ಮಿಂಚಂಚೆ:- dtiramanagara@ gmail.com

ramanagara
Font Resize
Contrast