mysore

ಜಿಲ್ಲಾ ತರಬೇತಿ ಸಮಸ್ಥೆಯ ಬಗ್ಗೆ:

ಮೈಸೂರು ಜಿಲ್ಲಾ ತರಬೇತಿ ಸಂಸ್ಥೆಯು 1974ರಲ್ಲಿ ಆಡಳಿತ ತರಬೇತಿ ಸಂಸ್ಥೆಯ ಜಿಲ್ಲಾ ಮಟ್ಟದ ಅಧೀನ ತರಬೇತಿ ಸಂಸ್ಥೆಯಾಗಿ, ಕರ್ನಾಟಕ ಸರ್ಕಾರದ ಗುಂಪು ‘ಸಿ’ ಮತ್ತು ‘ಡಿ’ ವೃಂದದ ಸಿಬ್ಬಂದಿ ವರ್ಗದವರಿಗೆ ತರಬೇತಿ ಅಗತ್ಯತೆಗಳನ್ನು ಪೂರೈಸಲು ಪ್ರಾರಂಭಿಸಲಾಯಿತು. ಇದರ ಉಸ್ತುವಾರಿಗಾಗಿ ಪ್ರಾಚಾರ್ಯರ ಅಧೀನದಲ್ಲಿ ಉಪ-ಪ್ರಾಚಾರ್ಯರು, ಬೋಧಕರು ಮತ್ತು ಸಿಬ್ಬಂದಿವರ್ಗದವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಜಿಲಾ ್ಲತರಬೇತಿ ಸಂಸ್ಥೆಯು ಮೈಸೂರಿನ ನಜûರ್‍ಬಾದ್‍ನ ಟಿ.ನರಸೀಪುರ ರಸ್ತೆಯಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು; ಜಿಲ್ಲಾ ತರಬೇತಿ ಸಂಸ್ಥೆಯ ಆವರಣವು ಹಸಿರು, ಮರಗಿಡಗಳಿಂದ ಕೂಡಿದ್ದು; ತಂಪಾದ ಗಾಳಿ ಮತ್ತು ಶಬ್ದರಹಿತ ವಾತವರಣವು ತರಬೇತಿ ಕಾರ್ಯಕ್ರಮಗಳಿಗೆ ಪೂರಕ ವಾತಾವರಣವನ್ನು ಸೃಷ್ಠಿಸಿದೆ

ಮೂಲ ಸೌಕರ್ಯ:

ಈ ಸಂಸ್ಥೆಯ ಆವರಣವು ಆಡಳಿತ ಕಚೇರಿ, ಮೂರು ತರಬೇತಿ ಕೊಠಡಿಗಳು, ಒಂದು ಗಣಕಯಂತ್ರ ತರಬೇತಿ ಕೊಠಡಿಯನ್ನು ಒಳಗೊಂಡು ಪ್ರಶಿಕ್ಷಣಾರ್ಥಿಗಳ ಉಪಯೋಗಕ್ಕಾಗಿ 20 ಸುಸಜ್ಜಿತ ವಸತಿ ಕೊಠಡಿಗಳು ಮತ್ತು ಉಪಹಾರ ಗೃಹವನ್ನು ಹೊಂದಿರುತ್ತದೆ. ಕರ್ನಾಟಕ ಸರ್ಕಾರದ ಇ-ಆಡಳಿತವನ್ನು ಜಾರಿಗೆತರುವ ಸಲುವಾಗಿ ಒಂದು ವೀಡಿಯೋಕಾನ್ಫರೆನ್ಸ್ ಸ್ಟುಡಿಯೋ ನಿರ್ಮಾಣವು ಪ್ರಗತಿಯಲ್ಲಿರುತ್ತದೆ.

ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಒಟ್ಟು ಮೂರು ವಿಧದ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಮೊದಲನೆಯದಾಗಿ ಯೋಜಿತ ವಾರ್ಷಿಕ ತರಬೇತಿ ಕಾರ್ಯಕ್ರಮಗಳು, ಎರಡನೆಯದಾಗಿ ಪ್ರಾಯೋಜಿತ ತರಬೇತಿ ಕಾರ್ಯಕ್ರಮಗಳು ಮತ್ತು ಮೂರನೆಯದಾಗಿ ಇಲಾಖೆ/ನಿಗಮಗಳ ಬೇಡಿಕೆ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇವುಗಳ ಜೊತೆಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಸ್ತರಣಾ ತರಬೇತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ತರಬೇತಿ ಅಗತ್ಯತೆಗಳನ್ನು ಸಹ ಪೂರೈಸುತ್ತಿದೆ.
ಈ ಸಂಸ್ಥೆಯಲ್ಲಿ ಗುಂಪು ‘ಸಿ’ ಮತ್ತು ‘ಡಿ’ ವರ್ಗದವರಿಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಈ ತರಬೇತಿಯಲ್ಲಿ “ಸಾಮಾನ್ಯ ಆಡಳಿತ, ಕಚೇರಿ ಕಾರ್ಯವಿಧಾನಗಳು, ಹಣಕಾಸು ನಿರ್ವಹಣೆ, ಖಜಾನೆ ಇಲಾಖೆಯ ಹೆಚ್.ಆರ್.ಎಂ.ಎಸ್. ಮತ್ತು ಖಜಾನೆ-2ರ ತರಬೇತಿ ಕಾರ್ಯಕ್ರಮಗಳು, ಇ-ಆಡಳಿತ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಮಹಿಳಾ ಸಬಲೀಕರಣ ತರಬೇತಿ ಮತ್ತು ಕರ್ನಾಟಕ ಸರ್ಕಾರವು ಕಾಲ ಕಾಲಕ್ಕೆ ಅನುಷ್ಠಾನಗೊಳಿಸುವ ಯೋಜನೆಗಳ ಬಗ್ಗೆ ಅರಿವು ಮತ್ತು ತರಬೇತಿಯನ್ನು ನೀಡಲಾಗುತ್ತಿದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಶ್ರೀ. ಕೆ. ವಿ. ಶಿವರಾಮಯ್ಯ ಪ್ರಾಚಾರ್ಯರು
2 ಖಾಲಿ ಉಪ ಪ್ರಾಚಾರ್ಯರು
3 ಶ್ರೀಮತಿ ಎಸ್. ಸುಧಾ ಪತ್ರಾಂಕಿತ ಬೋಧಕರು
4 ಶ್ರೀಮತಿ ಎನ್.ಭಾರತಿ ಪತ್ರಾಂಕಿತ ಬೋಧಕರು
5 ಶ್ರೀಮತಿ ಜಗದಾಂಬ ಬಿ. ಬೋಧಕರು
6 ಶ್ರೀಮತಿ ಎನ್. ಲೀಲಾವತಿ ಬೋಧಕರು
7 ಶ್ರೀ ಮೋಹನ್ ರಾವ್ ಎಂ. ಪ್ರಥಮ ದರ್ಜೆ ಸಹಾಯಕರು
8 ಶ್ರೀ ಕೆ.ಎಂ.ಮನೋಜ್ ದ್ವಿತೀಯ ದರ್ಜೆ ಸಹಾಯಕರು
9 ಖಾಲಿ ಬೆರಳಚ್ಚುಗಾರರು
10 ಖಾಲಿ ಬೆರಳಚ್ಚುಗಾರರು
11 ಶ್ರೀಮತಿ ರತ್ನಮ್ಮ ಗ್ರೂಪ್ ಡಿ
12 ಶ್ರೀಮತಿ ಚಿನ್ನಮುತ್ತುರಾಣಿ ಗ್ರೂಪ್ ಡಿ

ಪ್ರಾಚಾರ್ಯರು

ಜಿಲ್ಲಾ ತರಬೇತಿ ಸಂಸ್ಥೆ

ನಂ.25, ಚಾಮುಂಡಿ ಸಂಕೀರ್ಣ,

ಮಲೆ ಮಹದೇಶ್ವರರಸ್ತೆ, ನಜರ್‍ಬಾದ್, ಮೈಸೂರು-570010.

ದೂರವಾಣಿ ಸಂಖ್ಯೆ:-0821-2520195

 ಫ್ಯಾಕ್ಸ್: 0821-2440060

ಮಿಂಚಂಚೆ:      dtimys@gmail.com

mysore
Font Resize
Contrast