mandya

ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆಯು 1978ನೇ ಸಾಲಿನಿಂದ ಪ್ರಾರಂಭವಾಗಿದ್ದು, ರೈಲು ನಿಲ್ದಾಣದಿಂದ 03ಕಿ.ಮೀ, ಕೇಂದ್ರೀಯ  ಬಸ್ ನಿಲ್ದಾಣದಿಂದ  1.5 ಕಿ.ಮೀ ಅಂತರದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಸ್ಥೆಯು ಮಂಡ್ಯ ಜಿಲ್ಲೆಯ ಗುಂಪು ಸಿ ಮತ್ತು ಡಿ ವೃಂದದ ನೌಕರರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ವೃತ್ತಿ ಬುನಾದಿ ತರಬೇತಿ ಗುಣೋತ್ಕರ್ಷ ತರಬೇತಿಯನ್ನು ನೀಡುವ ಮೂಲಕ ಸೇವೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ.

ಇವುಗಳಲ್ಲದೇ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು/ ಅಬ್ದುಲ್ ನಜೀ಼ರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ/ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಆವರಣದಲ್ಲಿ ಸ್ಥಾಪಿತವಾಗಿರುವ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ & ಸಮಾನತೆಯ ಕೇಂದ್ರ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರ-ಕರ್ನಾಟಕ ಕೇಂದ್ರ/ ಕೋಶ/ ಇಲಾಖೆಗಳ ತರಬೇತಿಯನ್ನೂ ಸಹ ನಡೆಸಲಾಗುತ್ತಿದೆ.

e-office ತರಬೇತಿಯನ್ನು ಗುಂಪು ಎ, ಗುಂಪು ಬಿ, ಗುಂಪು ಸಿ ವೃಂದದ ಅಧಿಕಾರಿ/ ಸಿಬ್ಬಂದಿಗಳಿಗೆ ಮತ್ತು e-PAR ತರಬೇತಿಯನ್ನು ಗುಂಪು ಎ, ಗುಂಪು ಬಿ, ವೃಂದದ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 2 ತರಬೇತಿ ಸಭಾಂಗಣಗಳು,    ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಪದನಾಮ
1 ಶ್ರೀ ಸಿದ್ದಸ್ವಾಮಿ ಪ್ರಾಚಾರ್ಯರು
2 ಶ್ರೀಮತಿ ಕೆ. ಸೌಮ್ಯ ಉಪ ಪ್ರಾಚಾರ್ಯರು
3 ಶ್ರೀಎಸ್. ನಾಗೇಶ್ ಬೋಧಕರು
4 ಶ್ರೀಮತಿ ಯಶೋಧ ಬೋಧಕರು
5 ಶ್ರೀಮತಿ ಭವ್ಯಶ್ರೀ ಪ್ರಥಮ ದರ್ಜೆ ಸಹಾಯಕರು
6 ಖಾಲಿ ದ್ವಿತೀಯ ದರ್ಜೆ ಸಹಾಯಕರು
7 ಶ್ರೀ ಪವನ್ ಬೆರಳಚ್ಚುಗಾರರು
8 ಶ್ರೀಮತಿ ಭಾಗ್ಯ ಬೆರಳಚ್ಚುಗಾರರು
9 ಶ್ರೀಮತಿ ಮಹದೇವಮ್ಮ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಜಿಲ್ಲಾ ತರಬೇತಿ ಸಂಸ್ಥೆ,

ಜಿಲ್ಲಾ ಪಂಚಾಯತ್ ಎದುರು,

ಮಂಡ್ಯ- 571041

ದೂರವಾಣಿ ಸಂಖ್ಯೆ:-08232-22071

ಮಿಂಚಂಚೆ:- mandya.dti@gmail.com

mandya
Font Resize
Contrast