bidar

ಬೀದರ್ ಜಿಲ್ಲಾ ತರಬೇತಿ ಸಂಸ್ಥೆಯು 1996ನೇ ಸಾಲಿನಿಂದ ಪ್ರಾರಂಭವಾಗಿದ್ದು, ರೈಲು ನಿಲ್ದಾಣದಿಂದ 7ಕಿ.ಮೀ, ಕೇಂದ್ರೀಯ ಬಸ್ ನಿಲ್ದಾಣದಿಂದ 5ಕಿ.ಮೀ ಅಂತರದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಸ್ಥೆಯು ಬೀದರ್ ಜಿಲ್ಲೆಯ ಗುಂಪು ಸಿ ಮತ್ತು ಡಿ ವೃಂದದ ನೌಕರರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ವೃತ್ತಿ ಬುನಾದಿ ತರಬೇತಿ ಗುಣೋತ್ಕರ್ಷ ತರಬೇತಿಯನ್ನು ನೀಡುವ ಮೂಲಕ ಸೇವೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ.

ಇವುಗಳಲ್ಲದೇ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು/ ಅಬ್ದುಲ್ ನಜೀ಼ರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ/ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಆವರಣದಲ್ಲಿ ಸ್ಥಾಪಿತವಾಗಿರುವ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ & ಸಮಾನತೆಯ ಕೇಂದ್ರ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಲ ಕೇಂದ್ರ-ಕರ್ನಾಟಕ ಕೇಂದ್ರ/ ಕೋಶ/ ಇಲಾಖೆಗಳ ತರಬೇತಿಯನ್ನೂ ಸಹ ನಡೆಸಲಾಗುತ್ತಿದೆ.

e-office ತರಬೇತಿಯನ್ನು ಗುಂಪು ಎ, ಗುಂಪು ಬಿ, ಗುಂಪು ಸಿ ವೃಂದದ ಅಧಿಕಾರಿ/ ಸಿಬ್ಬಂದಿಗಳಿಗೆ ಮತ್ತು e-PAR ತರಬೇತಿಯನ್ನು ಗುಂಪು ಎ, ಗುಂಪು ಬಿ, ವೃಂದದ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ಮೂಲ ಸೌಕರ್ಯ:

ಕಟ್ಟಡವು ಕಛೇರಿಯೊಂದಿಗೆ ವಸತಿ ನಿಲಯವನ್ನು ಹೊಂದಿರುತ್ತದೆ. ಹೊಸ ಕಟ್ಟಡದ ಕಛೇರಿಯಲ್ಲಿ ಪ್ರಾಚಾರ್ಯಾರ ಕೊಣೆ, ಉಪ ಪ್ರಾಚಾರ್ಯಯ ಕೊಣೆ, ಸಿಬ್ಬಂದಿಯವರ ಕೊಣೆ, ಎರಡು ತರಬೇತಿ ಕೊಠಡಿಗಳು, ಒಂದು ಕಂಪ್ಯೂಟರ ಕೊಣೆ, ಹಾಗೂ ಗ್ರಂಥಾಲಯ ಹೊಂದಿರುತ್ತದೆ. ವಸತಿ ನಿಲಯದಲ್ಲಿ 4 ಕೊಠಡಿಗಳಿಗೆ ಶೌಚಾಲಯ ಹೊಂದಿರುತ್ತವೆ. ಪ್ರತಿ ರೂಮಿಗೆ 8 ಕಾಟಗಳ ವ್ಯವಸ್ಥೆ ಇದೆ. ಎಲ್ಲಾ ಬಾತÀರೂಮಗಳಿಗೆ ಸೋಲಾರ ಹಾಟ್ ವಾಟರ್ ವ್ಯವಸ್ಥೆ ಇದೆ. ಒಟ್ಟು ವಸತಿನಿಲಯದಲ್ಲಿ 40 ಪ್ರಶಿಕ್ಷಣಾರ್ಥಿಗಳಿಗೆ ಉಳಿದುಕೊಳಲು ವ್ಯವಸ್ಥೆಯನ್ನು ಹೊಂದಿರುತ್ತದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಶ್ರೀ ಅಶೋಕ ವಿಶ್ವನಾಥಪ್ಪ ಪ್ರಾಚಾರ್ಯರು ಪ್ರಭಾರ
2 ಖಾಲಿ ಉಪ ಪ್ರಾಚಾರ್ಯರು
3 ಶ್ರೀಮತಿ ಪರಿಮಳಾ ಬೋಧಕರು
4 ಶ್ರೀ ಜೀತೇಂದ್ರ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಶ್ರೀಮತಿ. ಸಾವಿತ್ರಮ್ಮ ದ್ವಿತೀಯ ದರ್ಜೆ ಸಹಾಯಕರು
7 ಶ್ರೀ. ವಿನಯಕುಮಾರ ಬೆರಳಚ್ಚುಗಾರ
8 ಖಾಲಿ ಬೆರಳಚ್ಚುಗಾರ
9 ಶ್ರೀಮತಿ. ವಿಶಾಲಾಕ್ಷಿ ಗ್ರೂಪ್ ಡಿ
10 ಶ್ರೀ ಸಂಜೀವ್ ಮಾರ್ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಬೀದರ ಪಾಂಡೆ ಫಾರ್ಮಸಿ ಕಾಲೇಜು ಎದುರುಗಡೆ

ನೌಬಾದ ಬೀದರ-585402

ದೂರವಾಣಿ ಸಂ:- 08482-232668

ಇ-ಮೇಲ್:- dtibidar@gmail.com / dtibidar@gmail.com

bidar
Font Resize
Contrast