bagal-kot

ಜಿಲ್ಲಾ ತರಬೇತಿ ಸಂಸ್ಥೆ ಬಗ್ಗೆ:

ಅಖಂಡ ವಿಜಯಪುರ ಜಿಲ್ಲೆಯಿಂದ ಜಿಲ್ಲಾ ತರಬೇತಿ ಸಂಸ್ಥೆಯು ಬೇರ್ಪಟ್ಟು ನೂತನವಾಗಿ ದಿನಾಂಕ: 01.04.2011 ರಂದು ಬಾಗಲಕೋಟೆ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ಬಂದಿದ್ದು, ಈ ಕಛೇರಿಯಲ್ಲಿ ಪ್ರಥಮವಾಗಿ ಜಿಲ್ಲಾಧಿಕಾರಿಗಳ ಅವರಣದಲ್ಲಿರುವ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಗೊಂಡಿತ್ತು  ನಂತರ ನವನಗರ ಸೆಕ್ಟರ್‌ ನಂ :07 ರಲ್ಲಿ ಬಿಟಿಡಿಎ ದಿಂದ 4.ಎಕರೆ 7 ಗುಂಟೆ ಜಾಗೆಯನ್ನು ಪಡೆದುಕೊಂಡು ಸುಮಾರು 2 ಎಕರೆ ಜಾಗೆಯಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಆಡಳಿತ ಕಛೇರಿ ಹಾಗೂ ವಸತಿ ನಿಲಯದ ಕಟ್ಟಡವನ್ನು ನಿರ್ಮಿಸಲಾಗಿದ್ದು. ಈ ಕಟ್ಟಡವನ್ನು ಕೆ.ಆರ್.ಐ.ಡಿ.ಎಲ್‌ ರವರು ರೂ.3.19 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು , ಈ ಕಟ್ಟಡವನ್ನು ಆಗಿನ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು  ದಿನಾಂಕ: 17.01.2016 ರಲ್ಲಿ ಉದ್ಘಾಟನೆಗೊಳಿಸಿದ್ದು.ನಂತರ ದಿನಾಂಕ: 18.03.2018 ರಂದು ಹೊಸ ಕಟ್ಟಡದಲ್ಲಿ ಕಛೇರಿಯನ್ನು ಕಾರ್ಯಾರಂಭ ಮಾಡಲಾಯಿತು.

ಬಾಗಲಕೋಟೆ ಜಿಲ್ಲಾ ತರಬೇತಿ ಸಂಸ್ಥೆಯ ನೂತನ ಕಟ್ಟಡದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳ “ಸಿ” ಮತ್ತು “ಡಿ” ವೃಂದದ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ, ಈ ತರಬೇತಿ ಸಂಸ್ಥೆಯು ನವನಗರ ಬಸ್‌ ನಿಲ್ದಾಣದಿಂದ ಸುಮಾರು 2 ಕಿ.ಮೀ.ದೂರದಲ್ಲಿದೆ, ಪಕ್ಕದಲ್ಲಿ ಕಲಾಭವನ ಮ್ಯೂಸಿಯಂ ಇದ್ದು, ಸರ್ಕಾರಿ ಜಿಲ್ಲಾ ಆಸ್ಪತ್ರೆಯು  ಕೂಡಾ  500ಮೀ. ಅಂತರದಲ್ಲಿದೆ. ಈ ಸಂಸ್ಥೆಯ ಆವರಣದಲ್ಲಿ ಸಾಕಷ್ಟು ಗಿಡ ಮರಗಳನ್ನು ಬೆಳೆಸಲಾಗಿದ್ದು, ಪ್ರಶಿಕ್ಷಣಾರ್ಥಿಗಳಿಗೆ  ಕುಳಿತುಕೊಳ್ಳಲು ಮರದ ಕೆಳಗೆ ಸಿಮೇಂಟ್‌ ನಿರ್ಮಿತ ಆಸನಗಳ ವ್ಯವಸ್ಥೆ, ಕಲ್ಪಿಸಲಾಗುವದು, ವ್ಯವಸ್ಥಾಪಕ ಸಮೀತಿಯಲ್ಲಿ ಅನುಮೋದನೆಗೊಂಡ ಕ್ರಿಯಾ ಯೋಜನೆಯಂತೆ  ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು /ಅಬ್ದುಲ್‌ ನಜೀರ್‌ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ / ರಾಜ್ಯ ನಗರಾಭಿವೃದ್ಧಿ ಸಂಸ್ಥೆಗಳ/ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಆಡಳಿತ ಸಂಸ್ಥೆಯ ಆವರಣದಲ್ಲಿ ಸ್ಥಾಪಿತವಾಗಿರುವ ಪ್ರಕೃತಿ ವಿಕೋಪ ನಿರ್ವಹಣೆ ಕೋಶ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೋಶ, ಇ-ಆಡಳಿತ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಳು ಕೋಶ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಈ ಐದು ಕೋಶಗಳ ತರಬೇತಿಗಳನ್ನೂ ಸಹ ಪ್ರಾಯೋಜಿತ ತರಬೇತಿಗಳನ್ನು ನಡೆಸಲಾಗುತ್ತಿದೆ. ಇದಲ್ಲದೆ, ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಮಾನ್ಯ ಮಹಾ ನಿರ್ದೇಶಕರು ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರ ನಿರ್ದೇಶನದಂತೆ e-PAR ಗ್ರೂಪ್‌ “ಎ” ಮತ್ತು ಗ್ರೂಪ್‌ “ಬಿ” ಅಧಿಕಾರಿಗಳಿಗೆ , ಹಾಗೂ e-office  ತರಬೇತಿಯನ್ನು ಸಿಬ್ಬಂದಿಗಳ ಜೊತೆಗೆ ಗ್ರೂಪ್‌ “ಎ” ಮತ್ತು ಗ್ರೂಪ್‌ “ಬಿ” ಅಧಿಕಾರಿಗಳಿಗೂ ಸಹ ತರಬೇತಿ ನೀಡಲಾಗಿದೆ..

ಮೂಲ ಸೌಕರ್ಯ:
ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ ಮೂರು ತರಬೇತಿ ಸಭಾಂಗಣಗಳು, ಕಂಪ್ಯೂಟರ್ ಲ್ಯಾಬ್ (40 ಕಂಪ್ಯೂಟರ್‍ಗಳು) ಇಂಟರ್‍ನೆಟ್ ಸೌಲಭ್ಯವಿರುತ್ತದೆ.

ಒಟ್ಟಾರೆಯಾಗಿ ಸರ್ಕಾರವು ಜಾರಿಗೆ ತಂದಿರುವ ಮತ್ತು ತರಬಹುದಾದ ಎಲ್ಲಾ ಹೊಸ ಯೋಜನೆಗಳ/ತಂತ್ರಾಂಶಗಳ ಕುರಿತಾಗಿ ಜಿಲ್ಲೆಯ ಸಮಗ್ರ “ಸಿ” ಮತ್ತು “ಡಿ” ವೃಂದದ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿ ಸರ್ಕಾರದ ರಾಜ್ಯ ತರಬೇತಿ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ನಿಟ್ಟಿನಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.

ಕ್ರಿಯಾ ಯೋಜನೆ 2019 -20

ವೀಕ್ಷಿಸಿ / ಡೌನ್ಲೋಡ್

 ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ರಾಜಶೇಖರಯ್ಯ ಪ್ರಾಚಾರ್ಯರು
2 ಶ್ರೀ  ರಾಜಶೇಖರ .ಎಸ್.‌ ಹಿರೇಮಠ ಉಪ ಪ್ರಾಚಾರ್ಯರು
3 ಶ್ರೀ ಎಸ್‌. ಜಿ.ಸಾಲಿಮಠ ಬೋಧಕರು-1
4 ಶ್ರೀ  ಮಲ್ಲಿಕಾರ್ಜುನ ಬಿ ಗುಡೂರ ಬೋಧಕರು-2
5 ಶ್ರೀಮತಿ ಶಾಂತಾಬಾಯಿ. ಎಸ್‌. ಪಾಟೀಲ ದ್ವಿತೀಯ ದರ್ಜೆ ಸಹಾಯಕರು
6 ಶ್ರೀಮತಿ  ಈರವ್ವ. ಡಿ.ಕೆಂಪಣ್ಣವರ ಗ್ರೂಪ್ ಡಿ

ಪ್ರಾಚಾರ್ಯರು,
ಜಿಲ್ಲಾ ತರಬೇತಿ ಸಂಸ್ಥೆ,
ಹುಬ್ಬಳಿ ಬೈಪಾಸ್‍ರೋಡ್
ಸೆಕ್ಟರ್. ನಂ-07, ನವನಗರ
ಬಾಗಲಕೋಟೆ –
ದೂರವಾಣಿ : 08354-297224
ಮಿಂಚಂಚೆ: dtibgk@gmail.com

bagal-kot
Font Resize
Contrast