bagalkote

ಬಾಗಲಕೋಟೆ ಜಿಲ್ಲಾ ತರಬೇತಿ ಸಂಸ್ಥೆಯು 2011ನೇ ಸಾಲಿನಿಂದ ಪ್ರಾರಂಭವಾಗಿದ್ದು, ರೈಲು ನಿಲ್ದಾಣದಿಂದ  08ಕಿ.ಮೀ, ಕೇಂದ್ರೀಯ  ಬಸ್ ನಿಲ್ದಾಣದಿಂದ  02ಕಿ.ಮೀ ಅಂತರದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಸ್ಥೆಯು ಬಾಗಲಕೋಟೆ ಜಿಲ್ಲೆಯ ಗುಂಪು ಸಿ ಮತ್ತು ಡಿ ವೃಂದದ ನೌಕರರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ವೃತ್ತಿ ಬುನಾದಿ ತರಬೇತಿ ಗುಣೋತ್ಕರ್ಷ ತರಬೇತಿಯನ್ನು ನೀಡುವ ಮೂಲಕ ಸೇವೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ.

ಇವುಗಳಲ್ಲದೇ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು/ ಅಬ್ದುಲ್ ನಜೀ಼ರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ/ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಆವರಣದಲ್ಲಿ ಸ್ಥಾಪಿತವಾಗಿರುವ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ & ಸಮಾನತೆಯ ಕೇಂದ್ರ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರ-ಕರ್ನಾಟಕ ಕೇಂದ್ರ/ ಕೋಶ/ ಇಲಾಖೆಗಳ ತರಬೇತಿಯನ್ನೂ ಸಹ ನಡೆಸಲಾಗುತ್ತಿದೆ.

e-office ತರಬೇತಿಯನ್ನು ಗುಂಪು ಎ, ಗುಂಪು ಬಿ, ಗುಂಪು ಸಿ ವೃಂದದ ಅಧಿಕಾರಿ/ ಸಿಬ್ಬಂದಿಗಳಿಗೆ ಮತ್ತು e-PAR ತರಬೇತಿಯನ್ನು ಗುಂಪು ಎ, ಗುಂಪು ಬಿ, ವೃಂದದ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ಮೂಲ ಸೌಕರ್ಯ:
ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ ಮೂರು ತರಬೇತಿ ಸಭಾಂಗಣಗಳು, ಕಂಪ್ಯೂಟರ್ ಲ್ಯಾಬ್ (40 ಕಂಪ್ಯೂಟರ್‍ಗಳು) ಇಂಟರ್‍ನೆಟ್ ಸೌಲಭ್ಯವಿರುತ್ತದೆ.

ಕ್ರಿಯಾ ಯೋಜನೆ 2019 -20

ವೀಕ್ಷಿಸಿ / ಡೌನ್ಲೋಡ್

 ಕ್ರಮ ಸಂಖ್ಯೆ ಹೆಸರು ಪದನಾಮ
1 ಶ್ರೀ ರಾಜಶೇಖರಯ್ಯ ವಿ ಎಸ್ ಪ್ರಾಚಾರ್ಯರು
2 ಶ್ರೀ  ರಾಜಶೇಖರ .ಎಸ್.‌ ಹಿರೇಮಠ ಉಪ ಪ್ರಾಚಾರ್ಯರು
3 ಶ್ರೀ ಎಸ್‌. ಜಿ.ಸಾಲಿಮಠ ಬೋಧಕರು
4 ಶ್ರೀ  ಮಲ್ಲಿಕಾರ್ಜುನ ಬಿ ಗುಡೂರ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಶ್ರೀಮತಿ ಶಾಂತಾಬಾಯಿ. ಎಸ್‌. ಪಾಟೀಲ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಶ್ರೀಮತಿ  ಈರವ್ವ. ಡಿ.ಕೆಂಪಣ್ಣವರ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಪ್ರಾಚಾರ್ಯರು,
ಜಿಲ್ಲಾ ತರಬೇತಿ ಸಂಸ್ಥೆ,
ಹುಬ್ಬಳಿ ಬೈಪಾಸ್‍ರೋಡ್
ಸೆಕ್ಟರ್. ನಂ-07, ನವನಗರ
ಬಾಗಲಕೋಟೆ –
ದೂರವಾಣಿ : 08354-297224
ಮಿಂಚಂಚೆ: dtibgk@gmail.com

ಬಾಗಲಕೋಟೆ
Font Resize
Contrast