bellary

 ಜಿಲ್ಲಾ ತರಬೇತಿ ಸಂಸ್ಥೆ  ಬಗ್ಗೆ:

ಆಡಳಿತ ತರಬೇತಿ ಸಂಸ್ಥೆ, ಮೈಸೂರು ಕಛೇರಿಯು ಮುಖ್ಯ ಕಛೇರಿಯಾಗಿದ್ದು, ಈ ಸಂಸ್ಥೆಯ ಮಾರ್ಗದರ್ಶನದಲ್ಲಿ ಬಳ್ಳಾರಿ ಜಿಲ್ಲಾ ತರಬೇತಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುತ್ತದೆ. ಈ ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಂಗ ಸಂಸ್ಥೆಯಾಗಿದ್ದು ಅವರ ಅಧೀನ ಕಛೇರಿಯು ಸಹಾ ಆಗಿರುತ್ತದೆ. ಈ ಸಂಸ್ಥೆಯಲ್ಲಿ ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳ ನೌಕರರಿಗೆ ಸಂಬಂಧಪಟ್ಟಂತಹ ಕಾಯ್ದೆ, ಕಾನೂನು ಹಾಗೂ ನಿಯಮಗಳ ಮತ್ತು ಇತ್ಯಾದಿ ಅವಶ್ಯಕ ವಿಷಯಗಳ ಕುರಿತು ತರಬೇತಿ ನೀಡುವ ಉದ್ದೇಶವಾಗಿರುತ್ತದೆ ಪ್ರತಿ ವರ್ಷ ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ʻಸಿʻ ವೃಂದದ ನೌಕರರುಗಳಿಗೆ 45 ಕಾರ್ಯನಿರ್ವಹಿಸುವ ದಿನಗಳ ಒಟ್ಟು 60 ದಿನಗಳ (ವಸತಿ ಸಹಿತ) ವೃತ್ತಿ ಬುನಾದಿ ತರಬೇತಿಯನ್ನು ಈ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಆಡಳಿತ ತರಬೇತಿ ಸಂಸ್ಥೆ,

ಮೈಸೂರು ರವರು ಮತ್ತು ಎಸ್.ಐ. ಯು. ಡಿ ಹಾಗೂ SIRD ಮೈಸೂರು ರವರು ಮತ್ತು ಜಿಲ್ಲಾಧಿಕಾರಿಗಳು ರವರು ನಿರ್ದೇಶಿಸುತ್ತಿರುವ ತರಬೇತಿಗಳನ್ನು ಮತ್ತು ಈ ಜಿಲ್ಲೆಯಲ್ಲಿ ಹಮ್ಮಿಕೊಂಡ ತರಬೇತಿಗಳಿಗೆ ಸಹಾಯಕರಾಗಿ ಸಹಕಾರ ಸಹ ನೀಡುತಿರುತ್ತೇವೆ. ಹಾಗೂ ಮೇಲಾಧಿಕಾರಿಗಳ ನಿರ್ದೇಶನಗಳ ಮೇರೆಗೆ ಈ ಸಂಸ್ಥೆಯಲ್ಲಿ ಹಾಗೂ ಕಛೇರಿಯ ಹೊರಗೆ ಅಂದರೆ ತಾಲೂಕು ಮಟ್ಟದಲ್ಲಿ ಸಕಾಲ ಮಾಹಿತಿ ಹಕ್ಕು ಅಧಿನಿಯಮ-2005, ಖಜಾನೆ-2, ಹೆಚ್.‌ ಆರ್‌, ಎಮ್.‌ ಎಸ್.‌ ಇತರೆ ಹಾಗೂ ಪ್ರಾಯೋಜಿತ ತರಬೇತಿಗಳನ್ನು ಹಮ್ಮಿಕೊಂಡು ನಡೆಸಲಾಗುತ್ತಿದೆ ಹಾಗೂ ಪ್ರತಿಯೊಂದು ವಿಷಯಗಳ ಕುರಿತು ಗುಣಾತ್ಮಕ ತರಬೇತಿಗಳನ್ನು ಆಯಾ ವಿಷಯಗಳಲ್ಲಿ ಪರಿಣಿತರಾಗಿರುವ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಬೋಧಕರನ್ನೊಳಗೊಂಡಂತೆ ಪ್ರತಿ ವಿಷಯದ ಕುರಿತು ಗುಣಾತ್ಮಕ ತರಬೇತಿಗಳನ್ನು ನಡೆಸಲಾಗುತ್ತಿದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 3 ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ. ತರಬೇತಿಗಾಗಿ ಆಗಮಿಸುವ ಶಿಕ್ಷಣಾರ್ಥಿಗಳಿಗೆ ವಾಸ್ತವ್ಯದ ಸಲುವಾಗಿ 21 ಕೋಠಡಿಯುಳ್ಳ 65 ಹಾಸಿಗೆಯ ಸುಸಜ್ಜಿತ ವಸತಿ ನಿಲಯ ಹೊಂದಿದ್ದು ಇದರಲ್ಲಿ 11 ಕೋಠಡಿಗಳು ಸ್ನಾನಗೃಹ ಸಹಿತ ಇರುತ್ತವೆ. ಇನ್ನುಳಿದ 10 ಕೋಠಡಿಗಳು ಸಾಮಾನ್ಯ ಸ್ನಾನಗೃಹ/ ಶೌಚಾಲಯಗಳನ್ನು ಹೊಂದಿರುತ್ತವೆ. ಸೋಲಾರ ವಾಟರ ಹಿಟರ್‌ ಇದೆ. ಒಂದೇ ಸಮಯಕ್ಕೆ 60-65 ಶಿಕ್ಷಣಾರ್ಥಿಗಳು ವಾಸ್ತವ್ಯ ಮಾಡಬಹುದಾಗಿದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರಿಮತಿ/ಶ್ರೀ ಪದನಾಮ
1 ಎ ಶ್ರೀಧರನ್ ಪ್ರಾಚಾರ್ಯರು (ಅಧಿಕ ಪ್ರಭಾರ)
2 ಎಸ್ ಸುರೇಶ್ ಬಾಬು ಉಪ ಪ್ರಾಚಾರ್ಯರು
3 ವನಜಾ ಬೋಧಕರು
4 ಕೆ. ಅಜಿತ್ ಸಿಂಗ್ ಬೋಧಕರು
5 ಎಂ.ಶ್ರೀಧರ್ ಪ್ರಥಮ ದರ್ಜೆ ಸಹಾಯಕರು
6 ಶಮೀಮ್ ಬೇಗಂ ದ್ವಿತೀಯ ದರ್ಜೆ ಸಹಾಯಕರು
7 ಸುಜಾತಎಸ್. ಎಂ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಹೆಚ್.ಐ.ನಂದ್ಯಾಳ್ ಗ್ರೂಪ್ ಡಿ
10 ಚೆನ್ನನೀಲಕಂಠೇಶ್ವರ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಪ್ರಾಚಾರ್ಯರು,

ಜಿಲ್ಲಾ ತರಬೇತಿ ಸಂಸ್ಧೆ,

ಗುಗ್ಗರಹಟ್ಟಿ, ಬಳ್ಳಾರಿ

ದೂರವಾಣಿ  ಸಂಖ್ಯೆ:- 08392-250170

ಮಿಂಚಂಚೆ:- dtibellary@gmail.com

bellary
Font Resize
Contrast