dharwad

ಧಾರವಾಡ ಜಿಲ್ಲಾ ತರಬೇತಿ ಸಂಸ್ಥೆಯು 1974ನೇ ಸಾಲಿನಿಂದ ಪ್ರಾರಂಭವಾಗಿದ್ದು, ರೈಲು ನಿಲ್ದಾಣದಿಂದ  04ಕಿ.ಮೀ, ಕೇಂದ್ರೀಯ  ಬಸ್ ನಿಲ್ದಾಣದಿಂದ  06ಕಿ.ಮೀ ಅಂತರದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಸ್ಥೆಯು ಧಾರವಾಡ ಜಿಲ್ಲೆಯ ಗುಂಪು ಸಿ ಮತ್ತು ಡಿ ವೃಂದದ ನೌಕರರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ವೃತ್ತಿ ಬುನಾದಿ ತರಬೇತಿ ಗುಣೋತ್ಕರ್ಷ ತರಬೇತಿಯನ್ನು ನೀಡುವ ಮೂಲಕ ಸೇವೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ.

ಇವುಗಳಲ್ಲದೇ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು/ ಅಬ್ದುಲ್ ನಜೀ಼ರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ/ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಆವರಣದಲ್ಲಿ ಸ್ಥಾಪಿತವಾಗಿರುವ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ & ಸಮಾನತೆಯ ಕೇಂದ್ರ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರ-ಕರ್ನಾಟಕ ಕೇಂದ್ರ/ ಕೋಶ/ ಇಲಾಖೆಗಳ ತರಬೇತಿಯನ್ನೂ ಸಹ ನಡೆಸಲಾಗುತ್ತಿದೆ.

e-office ತರಬೇತಿಯನ್ನು ಗುಂಪು ಎ, ಗುಂಪು ಬಿ, ಗುಂಪು ಸಿ ವೃಂದದ ಅಧಿಕಾರಿ/ ಸಿಬ್ಬಂದಿಗಳಿಗೆ ಮತ್ತು e-PAR ತರಬೇತಿಯನ್ನು ಗುಂಪು ಎ, ಗುಂಪು ಬಿ, ವೃಂದದ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಕಟ್ಟಡದಲ್ಲಿ, 2 ತರಬೇತಿ ಕೊಠಡಿಗಳು, 1 ಗಣಕಯಂತ್ರ (22 ಸಂ) ಪ್ರಯೋಗ ಶಾಲೆ ಹಾಗೂ ವಿಡಿಯೋ ಕಾನ್ಫರೆನ್ಸ್ ಕೊಠಡಿಗಳು ಇರುತ್ತವೆ ಮಲಪ್ರಭಾ ವಸತಿ ನಿಲಯದಲ್ಲಿ ಒಟ್ಟು 24 ಕೊಠಡಿಗಳು, ಒಂದು ತರಬೇತಿ ಕೊಠಡಿ, ಅಡಿಗೆ ಕೋಣೆ, ಊಟದ ಮನೆ ಇರುತ್ತವೆ. ಹೊಸ ವಸತಿ ನಿಲಯದಲ್ಲಿ 4 ಕೊಠಡಿಗಳು ಇರುತ್ತವೆ. ಸಂಸ್ಥೆಯಲ್ಲಿ 2000 ಲೀ ನೀರಿನ ಸಾಮರ್ಥ್ಯದ ಸೌರಶಕ್ತಿಯ ಮತ್ತು ಕೊಳವೆ ಭಾವಿಯ ವ್ಯವಸ್ಥೆ ಇರುತ್ತದೆ. ಸಂಸ್ಥೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಚತೆಗಾಗಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಮತ್ತು ಅವಶ್ಯ ಸ್ಥಳಗಳಲ್ಲಿ ಡಸ್ಟಬೀನಗಳನ್ನು ಇಡಲಾಗಿದೆ.

ತರಬೇತಿಗಾಗಿ ಆಗಮಿಸುವ ಶಿಕ್ಷಣಾರ್ಥಿಗಳಿಗೆ ವಾಸ್ತವ್ಯದ ಸಲುವಾಗಿ 21 ಕೋಠಡಿಯುಳ್ಳ 65 ಹಾಸಿಗೆಯ ಸುಸಜ್ಜಿತ ವಸತಿ ನಿಲಯ ಹೊಂದಿದ್ದು ಇದರಲ್ಲಿ 11 ಕೋಠಡಿಗಳು ಸ್ನಾನಗೃಹ ಸಹಿತ ಇರುತ್ತವೆ. ಇನ್ನುಳಿದ 10 ಕೋಠಡಿಗಳು ಸಾಮಾನ್ಯ ಸ್ನಾನಗೃಹ/ ಶೌಚಾಲಯಗಳನ್ನು ಹೊಂದಿರುತ್ತವೆ. ಸೋಲಾರ ವಾಟರ ಹಿಟರ್‌ ಇದೆ. ಒಂದೇ ಸಮಯಕ್ಕೆ 60-65 ಶಿಕ್ಷಣಾರ್ಥಿಗಳು ವಾಸ್ತವ್ಯ ಮಾಡಬಹುದಾಗಿದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಶ್ರೀಮತಿ. ಕವಿತಾ. ಎ.ಎಸ್‌ ಪ್ರಾಚಾರ್ಯರು
2 ಶ್ರೀಮತಿ. ನಾಗರತ್ನಾ. ಪಿ. ಹೂಗಾರ ಉಪ ಪ್ರಾಚಾರ್ಯರು
3 ಪತ್ರಾಂಕಿತ ಬೋಧಕರು-1
4 ಪತ್ರಾಂಕಿತ ಬೋಧಕರು-2
5 ಶ್ರೀ. ಎ. ಎ. ಮಾಳಾಪೂರ ಬೋಧಕರು
6 ಶ್ರೀ. ಎಲ್.‌ ಪಿ. ಪೂಜಾರ ಬೋಧಕರು
7 ಶ್ರೀ. ಕಿರಣ. ಜೋಶಿ ಪ್ರಥಮ ದರ್ಜೇ ಸಹಾಯಕ
8 ಶ್ರೀಮತಿ. ಜಯಮ್ಮಾ. ಭೂಶೇರ ದ್ವೀತಿಯ ದರ್ಜೇ ಸಹಾಯಕ
9 ಶ್ರೀ ಎಂ ಎಸ್ ರೋಣ ಬೆರಳಚ್ಚುಗಾರ
10 ಖಾಲಿ ಬೆರಳಚ್ಚುಗಾರ
11 ಶ್ರೀ. ಡಿ. ಸಿ. ಪಾಟೀಲ ಗ್ರೂಪ್‌ ಡಿ
12 ಶ್ರೀಮತಿ. ಕರೆವ್ವ. ಮ. ಮಾದರ ಗ್ರೂಪ್‌ ಡಿ
13 ಖಾಲಿ ಗ್ರೂಪ್‌ ಡಿ

ಧಾರವಾಡ ಜಿಲ್ಲಾ ತರಬೇತಿ ಸಂಸ್ಥೆ

ಗಾಂಧಿನಗರ, 2ನೇ ಕ್ರಾಸ್,

ಧಾರವಾಡ.-580004,

ದೂರವಾಣಿ ಸಂಖ್ಯೆ:  0836-2468262

ಮಿಂಚಂಚೆ:- dtidharwad@gmail.com

dharwad
Font Resize
Contrast