chitradurga

ಜಿಲ್ಲಾ ತರಬೇತಿ ಸಂಸ್ಥೆ  ಬಗ್ಗೆ:

ಚಿತ್ರದುರ್ಗ ಜಿಲ್ಲಾ ತರಬೇತಿ ಸಂಸ್ಥೆಯು  1981  ನೇ ಸಾಲಿನಿಂದ ಪ್ರಾರಂಭವಾಗಿದ್ದು, ಈ ಸಂಸ್ಥೆಯು ಮೈಸೂರು ಆಡಳಿತ ಸಂಸ್ಥೆಯ ಒಂದು ಅಂಗ ಸಂಸ್ಥೆಯಾಗಿರುತ್ತದೆ. ಇದು ಚಿತ್ರದುರ್ಗ ಜಿಲ್ಲೆಯ 06  ತಾಲ್ಲೂಕುಗಳ ಗುಂಪು ‘ಸಿ’ ಮತ್ತು ‘ಡಿ’ ವೃಂದದÀ ನೌಕರರಿಗೆ ತರಬೇತಿ ನೀಡುವ ಒಂದು ಉತ್ತಮ ಸಂಸ್ಥೆಯಾಗಿರುತ್ತದೆ.  ಈ ತರಬೇತಿ ಸಂಸ್ಥೆಯ ದೃಷ್ಟಿಕೋನವೇನೆಂದರೆ ಸರ್ಕಾರಿ ನೌಕರರ  ಸಾಮಥ್ರ್ಯಾಭಿವೃದ್ದಿ ಮತ್ತು ಮಾನವ ಸಂಪನ್ಮೂಲಾಭಿವೃದ್ದಿಯ ಉತ್ಕøಷ್ಟಕೇಂದ್ರವಾಗಿ ಹೊರಹೊಮ್ಮುವುದಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶಗಳೆಂದರೆ…

  • ಸಾರ್ವಜನಿಕ ಅಗತ್ಯಗಳಿಗೆ ಸ್ಪಂದಿಸುವಂತೆ ಆಡಳಿತ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ನೌಕರರ ಸಾಮಥ್ರ್ಯವನ್ನು ವೃದ್ಧಿಪಡಿಸುವ ಮತ್ತು ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಅವರನ್ನು ಪರಿವರ್ತಿಸುವುದು.
  • ಅಗತ್ಯಾಧಾರಿತ ತರಬೇತಿ ಮತ್ತುಕಲಿಕೆಯ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಮುನ್ನಡೆಯುವುದು.
  • ನೌಕರರಲ್ಲಿ ಉತ್ತಮ ಕಾರ್ಯ ನಿವಾಹಣಾ ಕೌಶಲ್ಯ ಮತ್ತು ಸೇವಾ ಮನೋಭಾವನೆಯನ್ನು ಹೆಚ್ಚಿಸುವುದು.
  • ಉತ್ತಮ ಗುಣಮಟ್ಟದ ತರಬೇತಿ ಮತ್ತು ಸಾಮಥ್ರ್ಯ ವರ್ಧನೆಯ ವ್ಯಾಪಕ  ಶ್ರೇಣಿಯನ್ನು ಒದಗಿಸುವುದು.
  • ದಕ್ಷತೆಯಿಂದ ಕೂಡಿದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನೌಕರರ ಮನೋಧರ್ಮವನ್ನು ಬದಲಾಯಿಸಲು ಪರಿಣಾಮಕಾರಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು.
  • ಸರ್ಕಾರಿ ನೌಕರರಲ್ಲಿ ಇರುವ ನಿರೀಕ್ಷೆ ಮತ್ತು ಕಾರ್ಯ ನಿರ್ವಹಣೆಯ ನಡುವಣ ಅಂತರವನ್ನು ಹೋಗಲಾಡಿಸುವ ಬದ್ದತೆಯನ್ನು ಇರಿಸಿಕೊಳ್ಳುವುದಾಗಿರುತ್ತದೆ.

ಈ ಸಂಸ್ಥೆಯ ಕಾರ್ಯನಿರೂಪಣೆ ಏನೆಂದರೆ, ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ವ್ಯವಸ್ಥಾಪಕ ಸಮಿತಿಯನ್ನು ಹೊಂದಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿದ್ದು, ಪ್ರಾಚಾರ್ಯರು ಸದಸ್ಯ ಕಾರ್ಯದರ್ಶಿಗಳಾಗಿದ್ದು, ಇಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.   ವಾರ್ಷಿಕವಾಗಿ ಅಂದರೆ ಏಪ್ರಿಲ್ ಮಾಹೆಯಿಂದ ಮಾರ್ಚ್ ಮಾಹೆಯವರೆಗೆ ಸುಮಾರು 40 ರಿಂದ 42 ತರಬೇತಿಗಳನ್ನು ಹಮ್ಮಿಕೊಂಡು ವಾರ್ಷಿಕ ವೇಳಾಪಟ್ಟಿಯನ್ನು ಸಂಸ್ಥೆಯ ವತಿಯಿಂದ ತಯಾರಿಸಿ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಮಾನ್ಯ ಮಹಾ ನಿರ್ದೇಶಕರ ಅನುಮೋದನೆಗಾಗಿ ಸಲ್ಲಿಸಲಾಗುವುದು. ಅದರಂತೆ ವಾರ್ಷಿಕವಾಗಿ ತರಬೇತಿಗಳನ್ನು ಪರಿಣಾಮಕಾರಿಯಾಗಿ ನಡೆಸಿಕೊಂಡು ಬರಲಾಗುತ್ತದೆ. ಅಲ್ಲದೇ ಸಂಸ್ಥೆಗಳ ಪ್ರಾಯೋಜಕತ್ವ ತರಬೇತಿಗಳನ್ನು ನಡೆಸಲು ಮಾನ್ಯ ಮಹಾನಿರ್ದೇಶಕರು ನಿರ್ದೇಶಿಸಿದಲ್ಲಿ ಅವುಗಳನ್ನು ಸಹಾ ಈ ಸಂಸ್ಥೆಯಲ್ಲಿ ಆಯೋಜಿಸಲಾಗುವುದು. ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡಿ ಬಾಗಿಲು ಮಟ್ಟದ ತರಬೇತಿಗಳನ್ನು ನಡೆಸಲಾಗುವುದು.ಈ ಸಂಸ್ಥೆಯಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಗುಂಪು ‘ಸಿ ‘ನೌಕರರುಗಳಿಗೆ ವೃತ್ತಿ ಬುನಾದಿ ತರಬೇತಿಯನ್ನು, ಇತರೆ ಗುಂಪು ‘ಸಿ’ ನೌಕರರಿಗೆ ಪುನರ್‍ಮನನ ತರಬೇತಿಗಳನ್ನು ಮತ್ತು ಗುಂಪು ‘ಡಿ ‘ನೌಕರರಿಗೆ ವೃತ್ತಿ ಗುಣೋತ್ಕರ್ಷ ತರಬೇತಿಗಳನ್ನು ಆಯೋಜಿಸಲಾಗುವುದು. ತರಬೇತಿಗಳಲ್ಲಿ ಸೇವಾ ವಿಷಯಗಳು, ಆರ್ಥಿಕ ವಿಷಯಗಳು, ಆಡಳಿತಾತ್ಮಕ ವಿಷಯಗಳು, ಕಚೇರಿ ಕಾರ್ಯವಿಧಾನ, ಗಣಕಯಂತ್ರ ತರಬೇತಿ, ಇ-ಪ್ರೊಕ್ಯೂರ್‍ಮೆಂಟ್, ಇ-ಗವರ್ನೆನ್ಸ್ ಖಜಾನೆ-ಹೆಚ್.ಆರ್.ಎಮ್.ಎಸ್. ಹಾಗೂ ವರ್ತನಾ ವಿಷಯಗಳು ಹಾಗೂ ಇತರೆ ವಿಷಯಗಳ ಕುರಿತು ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು.  ತರಬೇತಿಯ ವಾರ್ಷಿಕ ವೇಳಾಪಟ್ಟಿಯನ್ನು ತಯಾರಿಸುವಾಗ ನವೀನ ವಿಷಯಗಳ ಕಲಿಕೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗುವುದು. ಪ್ರತಿ ವರ್ಷವೂ ಸುಮಾರು 1400 ರಿಂದ 1500 ಪ್ರಶಿಕ್ಷಣಾಥಿರ್üಗಳಿಗೆ ತರಬೇತಿಗಳನ್ನು ಈ ಸಂಸ್ಥೆಯ ವತಿಯಿಂದ ನೀಡಲಾಗುತ್ತಿದ್ದು, ತರಬೇತಿಗೆ ಹಾಜರಾಗುವ ಪ್ರಶಿಕ್ಷಣಾರ್ಥಿಗಳಿಗೆ ಮೊದಲನೆಯದಾಗಿ ಸಮಯಪ್ರಜ್ಞೆ ಮತ್ತು ಶಿಸ್ತನ್ನು ಮೂಡಿಸುವುದು ಮತ್ತು ಕಲಿಕೆಯ ವಾತಾವರಣವನ್ನು ಉತ್ತಮಗೊಳಿಸಿ ಪ್ರತಿಯೊಬ್ಬ ನೌಕರರು ತರಬೇತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ತರಬೇತಿ ಹೊಂದಿದ ಪ್ರಶಿಕ್ಷಣಾಥಿರ್üಗಳು ಅವರ ಕಾರ್ಯ ಕ್ಷೇತ್ರದಲ್ಲಿ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಮರ್ಥರಾಗುತ್ತಾರೆ.

ಮೂಲ ಸೌಕರ್ಯ:

ಚಿತ್ರದುರ್ಗ ಜಿಲ್ಲಾ ತರಬೇತಿ ಸಂಸ್ಥೆಯು  ನಗರದ  ಕ್ರೀಡಾಂಗಣ ರಸ್ತೆಯಲ್ಲಿ 2.38 ಎಕರೆ  ವಿಸ್ತೀರ್ಣದಲ್ಲಿದ್ದು, ಆಡಳಿತ  ಕಚೇರಿಯನ್ನು 1030 ಚ. ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿದ್ದು, ಈ ಸ್ವಂತ  ಕಟ್ಟಡವು ದಿ:17-08-2007  ರಿಂದ ಪ್ರಾರಂಭಗೊಂಡಿರುತ್ತದೆ.

ಈ ಕಟ್ಟಡದಲ್ಲಿ ಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ಒಂದು ತರಬೇತಿ ಕೊಠಡಿ ಮತ್ತು 35 ಗಣಕ ಯಂತ್ರಗಳನ್ನು ಅಳವಡಿಸಿರುವ ಒಂದು ಗಣಕಯಂತ್ರ ಕೊಠಡಿ, ಒಂದು ಗ್ರಂಥಾಲಯ ಕೊಠಡಿ, ಒಂದು ಅಭಿಲೇಖಾಲಯ ಕೊಠಡಿ ಇರುತ್ತದೆ. ಹಾಗೂ  ಒಂದು ಪ್ರಾಚಾರ್ಯರ ಕೊಠಡಿ ಮತ್ತು ಉಪ ಪ್ರಾಚಾರ್ಯರ ಹಾಗೂ  ಬೋಧಕರು ಕುಳಿತುಕೊಳ್ಳಲು ಒಂದು ಕೊಠಡಿ, ಸಿಬ್ಬಂದಿಯವರು  ಕುಳಿತು ಕೊಳ್ಳಲು ಒಂದು ಕೊಠಡಿ ವ್ಯವಸ್ಥೆ ಇರುತ್ತದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಪಿ.ವಿ ಸವಿತ ಪ್ರಾಚಾರ್ಯರು
2 ಪಿ.ಚಂದ್ರಕುಮಾರ ಉಪ ಪ್ರಾಚಾರ್ಯರು
3 ಬೋಧಕರು
4 ಬೋಧಕರು
5 ಎ. ರೇಖಾ ಪ್ರಥಮ ದರ್ಜೆ ಸಹಾಯಕರು
6 ಎಂ.ಎಸ್ ಚಂದ್ರಿಕ ದ್ವಿತೀಯ ದರ್ಜೆ ಸಹಾಯಕರು
7 ಬೆರಳಚ್ಚುಗಾರ
8 ಗ್ರೂಪ ಡಿ

ಚಿತ್ರದುರ್ಗ ಜಿಲ್ಲಾ ತರಬೇತಿ ಸಂಸ್ಥೆ

ವೀರ ವನಿತೆ ಓನಕೆ ಓಬವ್ವ ಕ್ರಿಡಾಂಗಣ ರಸ್ತೆ, ಪ್ರಶಾಂತ ನಗರ, ಚಿತ್ರದುರ್ಗ-577501

ದೂರವಾಣಿ ಸಂಖ್ಯೆ:08194-235271

ಮಿಂಚಂಚೆ:- dtichitradurga-kamy@nic.in

chitradurga
Font Resize
Contrast