madikeri

ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ಜಿಲ್ಲಾ ತರಬೇತಿ ಸಂಸ್ಥೆ, ಮಡಿಕೇರಿಯು ದಿನಾಂಕ: 25-11-1995 ರಂದು ಪ್ರಾರಂಭವಾಗಿ ಕೊಡಗು ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಕಛೇರಿಗಳಲ್ಲಿನ ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಡಳಿತ ತರಬೇತಿ ಸಂಸ್ಥೆಯ ಮೂಲಕ ಕಾಲಕಾಲಕ್ಕೆ ಹೊರಡಿಸುವ ಆದೇಶಾನುಸಾರ ತರಬೇತಿ ನೀಡಲಾಗುತ್ತಿದೆ.

ಜಿಲ್ಲೆಯ ವಿವಿಧ ಇಲಾಖೆಗಳ ಅವಶ್ಯಕತೆಗಳಿಗನುಸಾರವಾಗಿ ಆರ್ಥಿಕ ವರ್ಷಕ್ಕೆ ಹೊಂದುವಂತೆ ವಾರ್ಷಿಕ ತರಬೇತಿ ಕ್ಯಾಲೆಂಡರನ್ನು ರೂಪಿಸಿ, ಜಿಲ್ಲಾ ತರಬೇತಿ ಸಂಸ್ಥೆಯ ಮೇಲ್ವಿಚಾರಣೆಗಾಗಿ ಸರ್ಕಾರದಿಂದ ರಚಿಸಲಾಗಿರುವ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು.

ಸದರಿ ವಾರ್ಷಿಕ ತರಬೇತಿ ಕ್ರಿಯಾಯೋಜನೆಯಂತೆ ಮಾಹೆವಾರು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕೊಡಗು ಜಿಲ್ಲೆಯು ಕೇವಲ ಮೂರು ತಾಲೂಕುಗಳನ್ನು ಹೊಂದಿರುವುದರಿಂದ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶನದಂತೆ ವಾರ್ಷಿಕ 30 ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಒಟ್ಟು 8 ಮಂಜೂರಾದ ಹುದ್ದೆಗಳಿದ್ದು, ಹಾಲಿ ಖಾಯಂ ಸಿಬ್ಬಂದಿಗಳಲ್ಲಿ ಪ್ರಾಚಾರ್ಯರು, ಒಂದು ಬೋಧಕ ವೃಂದ ಮತ್ತು ಡಿ ದರ್ಜೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಉಪ ಪ್ರಾಚಾರ್ಯರು. ಪ್ರ.ದ.ಸ. ಒಂದು ಬೋಧಕ ವೃಂದ ಬೆರಳಚ್ಚುಗಾರರು ಹಾಗೂ ಒಂದು ಡಿ ವರ್ಗದ ಹುದ್ದೆಗಳು ಖಾಲಿಯಿರುತ್ತದೆ. ಬೆರಳಚ್ಚುಗಾರರು ಮತ್ತು ಡಿ ದರ್ಜೆಯ ಹುದ್ದೆಯ ಎದುರಾಗಿ ಟೆಂಡರ್ ಆಹ್ವಾನಿಸಿ ಡಾಟಾ ಎಂಟ್ರಿ ಅಪರೇಟರ್ ಹಾಗೂ ಡಿ ವರ್ಗದ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ಸೇವೆ ಪಡೆದು ಕಾರ್ಯನಿರ್ವಹಿಸಲಾಗುತ್ತಿದೆ. ಆದ್ದರಿಂದ ಅಗತ್ಯವಿರುವೆಡೆ ವಿವಿಧ ಇಲಾಖಾ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಮುಂತಾದ ವಿಷಯ ಪರಿಣಿತರನ್ನು ಅತಿಥಿ ಉಪನ್ಯಾಸಕರನ್ನಾಗಿ ಆಹ್ವಾನಿಸಿ, ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಸಂಸ್ಥೆಯು ಪ್ರಾರಂಭಗೊಂಡ ದಿನಾಂಕದಿಂದ ಇಲ್ಲಿಯವರೆಗೆ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಸ್ಥೆಗೆ ಸ್ವಂತ ನಿವೇಶನವು ಮಡಿಕೇರಿ ಜಿಲ್ಲಾಡಳಿತ ವತಿಯಿಂದ 1.25 ಎಕರೆ ಜಮೀನು ಮಂಜೂರಾಗಿದ್ದು, ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸಂಸ್ಥೆಯಿಂದ ಮುಖ್ಯ ವಾಸ್ತುಶಿಲ್ಪಿಗಳು, ಬೆಂಗಳೂರು ಇವರಿಗೆ ಅಂದಾಜು ವೆಚ್ಚ ಮತ್ತು ನಕ್ಷೆ ಕೋರಿ ಪತ್ರ ಬರೆಯಲಾಗಿದೆ.

ತರಬೇತಿ ನಡೆಸಲು ಜಿಲ್ಲಾಡಳಿತ ಹಾಗೂ ಕೇಂದ್ರ ಕಾರ್ಯಾಲಯದಿಂದ ಉತ್ತಮ ಸಹಕಾರ ದೊರೆಯುತ್ತಿದ್ದು ವಾರ್ಷಿಕ ತರಬೇತಿ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ಆಯೋಜಿಸಲಾಗು ವುದು.
ಜಿಲ್ಲಾ ತರಬೇತಿ ಸಂಸ್ಥೆಯು ಆಡಳಿತ ವಿಭಾಗ, ಎರಡು ತರಬೇತಿ ಸಭಾಂಗಣ, (ಒಂದು ಗಣಕಯಂತ್ರ ಕೊಠಡಿ) ಗ್ರಂಥಾಲಯ, ದಾಖಲೆ ಕೊಠಡಿ ಹೊಂದಿದ್ದು ತರಬೇತಿ ಸಭಾಂಗಣಗಳಲ್ಲಿ ಪ್ರೊಜೆಕ್ಟರು, ಪ್ರೊಜೆಕ್ಟರ್ ಪರದೆ, ಗಣಕಯಂತ್ರ, ವೈಟ್ ಬೋರ್ಡ್ ಹಾಗೂ ಉತ್ತಮ ಪೀಠೋಪಕರಣಗಳನ್ನು ಹೊಂದಿದೆ. ಒಂದು ತರಬೇತಿ ಕೊಠಡಿಯಲ್ಲಿ 35 ಪ್ರಶಿಕ್ಷಣಾರ್ಥಿಗಳು ಹಾಗೂ ಗಣಕ ಯಂತ್ರ ಕೊಠಡಿಯಲ್ಲಿ 20-25 ಆಸನಗಳುಳ್ಳ ವ್ಯವಸ್ಥೆಯಿರುತ್ತದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು, ಸುಸಜ್ಜಿತ 2 ತರಬೇತಿ ಸಭಾಂಗಣಗಳು, (ಕಂಪ್ಯೂಟರ್ 25) ಗಣಕಯಂತ್ರದ ಕೊಠಡಿ ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ರಾಜಲಕ್ಷಿ ಪ್ರಾಚಾರ್ಯರು
2 ಖಾಲಿ ಉಪ ಪ್ರಾಚಾರ್ಯರು
3 ಖಾಲಿ ಬೋಧಕರು
4 ಕೆ ವಾಸಂತಿ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಖಾಲಿ ಬೆರಳಚ್ಚುಗಾರರು
7 ಮಲ್ಲೇಶ್ .ಹೆಚ್.ಜೆ ಗ್ರೂಪ್ ಡಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು
ಸುಬೇದಾರ್ ಅಪ್ಪಯ್ಯಗೌಡ ರಸ್ತೆ,
ಮಡಿಕೇರಿ – 571 201, ಕೊಡಗು ಜಿಲ್ಲೆ
ದೂರವಾಣಿ:08272-221570/222570
ಇ-ಮೇಲ್- dtimadikeri-kamy@nic.in

madikeri
Font Resize
Contrast