kalburgi

ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯು 1972ನೇ ಸಾಲಿನಿಂದ ಪ್ರಾರಂಭವಾಗಿದ್ದು, ರೈಲು ನಿಲ್ದಾಣದಿಂದ  02ಕಿ.ಮೀ, ಕೇಂದ್ರೀಯ  ಬಸ್ ನಿಲ್ದಾಣದಿಂದ  02ಕಿ.ಮೀ ಅಂತರದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಸ್ಥೆಯು ಕಲಬುರಗಿ ಜಿಲ್ಲೆಯ ಗುಂಪು ಸಿ ಮತ್ತು ಡಿ ವೃಂದದ ನೌಕರರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ವೃತ್ತಿ ಬುನಾದಿ ತರಬೇತಿ ಗುಣೋತ್ಕರ್ಷ ತರಬೇತಿಯನ್ನು ನೀಡುವ ಮೂಲಕ ಸೇವೆಯ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ.

ಇವುಗಳಲ್ಲದೇ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಂತೆ ತರಬೇತಿಗಳನ್ನು ನಡೆಸುವುದರ ಜೊತೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರು/ ಅಬ್ದುಲ್ ನಜೀ಼ರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ/ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಆವರಣದಲ್ಲಿ ಸ್ಥಾಪಿತವಾಗಿರುವ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ & ಸಮಾನತೆಯ ಕೇಂದ್ರ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶ, ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರ-ಕರ್ನಾಟಕ ಕೇಂದ್ರ/ ಕೋಶ/ ಇಲಾಖೆಗಳ ತರಬೇತಿಯನ್ನೂ ಸಹ ನಡೆಸಲಾಗುತ್ತಿದೆ.

e-office ತರಬೇತಿಯನ್ನು ಗುಂಪು ಎ, ಗುಂಪು ಬಿ, ಗುಂಪು ಸಿ ವೃಂದದ ಅಧಿಕಾರಿ/ ಸಿಬ್ಬಂದಿಗಳಿಗೆ ಮತ್ತು e-PAR ತರಬೇತಿಯನ್ನು ಗುಂಪು ಎ, ಗುಂಪು ಬಿ, ವೃಂದದ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ಮೂಲ ಸೌಕರ್ಯ:

ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯು ಸ್ವಂತ ಸ್ಥಳ ಹೊಂದಿದ್ದು ಸುಸಜ್ಜಿತ ಸ್ವಂತ ಕಟ್ಟಡ ಕೂಡ ಹೊಂದಿರುತ್ತದೆ.  ಅದರಲ್ಲಿ ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಪತ್ರಾಂಕಿತ ಬೋಧಕರು, ಬೋಧಕರು ಮತ್ತು ಸಿಬ್ಬಂದಿಗಳಿಗೆ ಕುಳಿತು ಕೆಲಸ ನಿರ್ವಹಿಸಲು ಪ್ರತ್ಯೇಕ ಕೋಠಡಿಗಳನ್ನು ಹೊಂದಿರುತ್ತದೆ. ಕ್ರಮವಾಗಿ 35 ಮತ್ತು 70 ಶಿಕ್ಷಣಾರ್ಥಿಗಳು ಕುಳಿತುಕೊಳ್ಳಬಹುದಾದ (2) ತರಬೇತಿ ಕೋಠಡಿಗಳು, 27 ಗಣಕಯಂತ್ರಗಳನ್ನು ಹೊಂದಿರುವ ಸುಸಜ್ಜಿತ ಹವಾನಿಯಂತ್ರಿತ ಗಣಕಯಂತ್ರ ಲ್ಯಾಬ್‌ ಮತ್ತು ಒಂದೇ ಬಾರಿಗೆ 60-70 ಜನರಿಗೆ ವಿಡಿಯೋ ಕಾನ್ಫರನ್ಸ್‌ ಹಾಲ್‌ ನಲ್ಲಿ ಕುಳಿತು ಸಂವಹನದಲ್ಲಿ ಭಾಗವಹಿಸಬಹುದಾದ ವಿಡಿಯೋ ಕಾನ್ಫರನ್ಸ್‌ ಹಾಲ್‌ ಇರುತ್ತದೆ. ಇದು ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ವಿಸ್ತರಣಾ ತರಬೇತಿ ಕೇಂದ್ರವು ಕೂಡ ಇದ್ದು ತರಬೇತಿ ಸಭಾಂಗಣ ಹೊಂದಿರುತ್ತದೆ.

ತರಬೇತಿಗಾಗಿ ಆಗಮಿಸುವ ಶಿಕ್ಷಣಾರ್ಥಿಗಳಿಗೆ ವಾಸ್ತವ್ಯದ ಸಲುವಾಗಿ 21 ಕೋಠಡಿಯುಳ್ಳ 65 ಹಾಸಿಗೆಯ ಸುಸಜ್ಜಿತ ವಸತಿ ನಿಲಯ ಹೊಂದಿದ್ದು ಇದರಲ್ಲಿ 11 ಕೋಠಡಿಗಳು ಸ್ನಾನಗೃಹ ಸಹಿತ ಇರುತ್ತವೆ. ಇನ್ನುಳಿದ 10 ಕೋಠಡಿಗಳು ಸಾಮಾನ್ಯ ಸ್ನಾನಗೃಹ/ ಶೌಚಾಲಯಗಳನ್ನು ಹೊಂದಿರುತ್ತವೆ. ಸೋಲಾರ ವಾಟರ ಹಿಟರ್‌ ಇದೆ. ಒಂದೇ ಸಮಯಕ್ಕೆ 60-65 ಶಿಕ್ಷಣಾರ್ಥಿಗಳು ವಾಸ್ತವ್ಯ ಮಾಡಬಹುದಾಗಿದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಶ್ರೀ ಅಂಬೋಜಿ ನಾಯ್ಕೋಡಿ ಪ್ರಾಚಾರ್ಯರು
2 ಶ್ರೀಮತಿ ನಾಗಮ್ಮ ಎಂ.ಕೆ ಉಪ ಪ್ರಾಚಾರ್ಯರು
3 ಶ್ರೀ ಯೋಗೇಶ ಬೋಧಕರು
4 ಶ್ರೀ ಸುರೇಶ ತೋನಸಳ್ಳಿಕರ್ ಬೋಧಕರು
5 ಶ್ರೀಮತಿ ವಿಜಯಲಕ್ಷ್ಮೀ ಗುಡಿ ಪ್ರಥಮ ದರ್ಜೆ ಸಹಾಯಕರು
6 ಶ್ರೀಮತಿ ಶರಣಮ್ಮ ಅಲಿಯಾಸ ಲಕ್ಷ್ಮೀ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಶ್ರೀಮತಿ ಪ್ರೀಯಾ ಗ್ರೂಪ್ ಡಿ
10 ಶ್ರೀ ಅಬ್ದುಲ್ ಪಾಶಾ ಶೇಖ್ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಜಿಲ್ಲಾ ತರಬೇತಿ ಸಂಸ್ಥೆ ಮತ್ತು ವಿಸ್ತರಣಾ ತರಬೇತಿ ಕೇಂದ್ರ ಎನ್‌.ಜಿ.ಓ ಕಾಲೋನಿ, ಜೇವರ್ಗಿ ರಸ್ತೆ, ಕಲಬುರಗಿ-585102.

ದೂರವಾಣಿ / ಫ್ಯಾಕ್ಸ್‌ ಸಂಖ್ಯೆ: 08472-230473, 220473

ಇ-ಮೇಲ್‌ ವಿಳಾಸ: dtigulbarga-kamy@nic.in

kalburgi
Font Resize
Contrast