ದೃಷ್ಟಿಕೋನ:

ಸರ್ಕಾರಿ ಅಧಿಕಾರಿಗಳ ಸಾಮಥ್ರ್ಯವರ್ಧನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಒಂದು ಉತ್ಕೃಷ್ಠ ಕೇಂದ್ರವಾಗಿ ಹೊರಹೊಮ್ಮುವಂತೆ ಮಾಡುವುದು.

ಉದ್ದೇಶಗಳು:

1.ಜನರ ಅಗತ್ಯಗಳಿಗೆ ಸ್ಪಂದಿಸುವಂತೆ ಆಡಳಿತ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಕಾರ್ಯಭಾರಿಗಳ ಸಾಮಥ್ರ್ಯವನ್ನು ವೃದ್ಧಿಪಡಿಸುವ ಮತ್ತು ಅವರ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಅವರನ್ನು ಪರಿವರ್ತಿಸುವುದು.

2.ಅಗತ್ಯಾಧಾರಿತ ತರಬೇತಿ ಮತ್ತು ಕಲಿಕೆಯ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಮುನ್ನಡೆಯುವುದು.

3.ಉನ್ನತ ದರ್ಜೆಯ ತರಬೇತಿ ಮತ್ತು ಸಾಮಥ್ರ್ಯ ವರ್ಧನೆಯ ವ್ಯಾಪಕ ಶ್ರೇಣಿಯನ್ನು ಒದಗಿಸುವುದು.

4.ದಕ್ಷತೆಯಿಂದ ಕೂಡಿದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನೌಕರರ ಮನೋಧರ್ಮವನ್ನು ಬದಲಾಯಿಸಲು ಪರಿಣಾಮಕಾರಿ ವಿಧಾನಗಳನ್ನು ವೃದ್ಧಿಪಡಿಸುವುದು.

5.ತಜ್ಞತೆ ಮತ್ತು ಸಂಶೋಧನೆಯನ್ನು ಆಧರಿಸಿದ ನಾವೀನ್ಯತೆಯ ವಿಧಾನಗಳ ಮೂಲಕ ಸರ್ಕಾರಿ ನೌಕರರಲ್ಲಿ ಇರುವ ನಿರೀಕ್ಷೆ ಮತ್ತು ಕಾರ್ಯನಿರ್ವಹಣೆಯ ನಡುವಣ ಅಂತರವನ್ನು ಹೋಗಲಾಡಿಸುವ ಬದ್ಧತೆಯನ್ನು ಇರಿಸಿಕೊಳ್ಳುವುದು.

Font Resize
Contrast