|

 

The Administrative Training Institute(ATI) sprawls over a campus of more than 35 acres in the serene surroundings at the foothills of Chamundi Hills abutting the Karanji Lake. The State Institute for Urban Development (SIUD) and Abdul Nazir Sab State Institute for Rural Development (ANSSIRD) are also located in this campus.


ATI is the apex training institute of the Government of Karnataka. Training programmes that are conducted on regular basis include Foundation Course for Gazetted probationers of the State Civil Services, Orientation courses for IAS / IFS probationers allotted to Karnataka cadre, refresher courses for Senior Officers, Training of Trainers and training on Gender Issues, Financial Management, Legal Issues and Computer Applications. ATI caters mainly to the needs of Grade A and Grade B Officers. There are 28 District Training Institutes (DTIs) which conduct training programmes for Group 'C' and Group 'D' employees.

Induction Training Programme -Abstract

Induction Training Programme - Monitoring Team

Induction Training Programme - Bangalore (Rural)

Induction Training Programme - Belgaum

Induction Training Programme - Chitradurga

Induction Training Programme - Kalaburugi (Gulbarga)

Induction Training Programme - Mangalore

Induction Training Programme - Mysuru

Induction Training Programme - Sirsi

 

ಸ್ವಾತಂತ್ರೋತ್ತರ ಭಾರತದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಕೆಳಹಂತದ ಅಧಿಕಾರಿಗಳಿಗೆ ತರಬೇತಿ ನೀಡಬೇಕಾದ ಅವಶ್ಯಕತೆಯನ್ನು ಮನಗಂಡ ಭಾರತ ಸರ್ಕಾರವು ಮೈಸೂರಿನಲ್ಲಿ ಓರಿಯಂಟೇಷನ್ ಸ್ಟಡಿ ಸೆಂಟರ್ ಎಂಬ ಸಂಸ್ಥೆಯನ್ನು 1959ರಲ್ಲಿ ಸ್ಥಾಪಿಸಿತು . ನಂತರದ ದಿನಗಳಲ್ಲಿ ಸಂಸ್ಥೆಯು ತನ್ನ ಅಖಿಲ ಭಾರತ ಸ್ಥಿತಿಯನ್ನು ಕಾಪಡಿಕೊಳ್ಳುವುದು ಕಠಿಣವೆಂದು ಭಾವಿಸಿ ಆಯಾ ರಾಜ್ಯಗಳಿಗೆ ತರಬೇತಿ ಸಂಸ್ಥೆಯನ್ನು ವಹಿಸಿಕೊಟ್ಟಿತು. ಅಂತೆಯೆ 01.04.1967 ರಿಂದ ಆಡಳಿತ ತರಬೇತಿ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತ್ತು. ಆಡಳಿತ ತರಬೇತಿ ಸಂಸ್ಥೆಯ ಆವರಣವು 38 ಎಕರೆಗಳ ವಿಸ್ತೀರ್ಣದಲ್ಲಿ ಹರಡಿದೆ. ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಮತ್ತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿದೆ . ಮೊದಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಡಳಿತ ಪರಿವಿದಿಯಲ್ಲಿ ಇದ್ದ ಸಂಸ್ಥೆಯನ್ನು ನಂತರದ ದಿನಗಳಲ್ಲಿ ಅಖಿಲ ಭಾರತ ಸ್ವರೂಪ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ವಶಕ್ಕೆ ನೀಡಲಾಯಿತು. ಅಂದಿನಿಂದ ತಹಲ್ ವರೆಗೆ ಕರ್ನಾಟಕ ಸರ್ಕಾರದ ನ್ಯಾಯಂಗ ಮತ್ತು ಪೊಲೀಸ್ ಇಲಾಖೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ತರಬೇತಿ ನೀಡುವ ಹೊಣೆಯನ್ನು ಆಡಳಿತ ತರಬೇತಿ ಸಂಸ್ಥೆಯು ವಹಿಸಿಕೊಂಡು ಯಶಸ್ವಿಯಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.


ಆಡಳಿತ ತರಬೇತಿ ಸಂಸ್ಥೆ ನಿರ್ದೇಶನಾಲಯದ ಕೇಂದ್ರ ಕಛೇರಿಯು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲ್ಲಿನಲ್ಲಿದೆ . ಇಲ್ಲಿ ಸರ್ಕಾರದ ವಿವಿಧ ಇಲಾಖೆಗಳ 'ಎ' ಮತ್ತು 'ಬಿ' ವೃಂದದ ಅಧಿಕಾರಿಗಳು ಹಾಗು ಕರ್ನಾಟಕಕ್ಕೆ ವಹಿಸಿ ಕೊಡುವ ಐ.ಎ.ಎಸ್ ವೃಂದದ ಅಧಿಕಾರಿಗಳಿಗೆ ಮತ್ತು ನೇರ ನೇಮಕಾತಿ ಹೊಂದುವ ಅಧಿಕಾರಿಗಳಿಗೆ ಸಾಮಾನ್ಯ ಬುನಾದಿ ತರಬೇತಿ , ಇತರ ಅಧಿಕಾರಿಗಳಿಗೆ ವೃತ್ತಿ ತರಬೇತಿ ,ಸಂಕ್ಷಿಪ್ತ ತರಬೇತಿಗಳು , ವಿವಿಧ ವಿಷಯಾಧಾರಿತ ಅಲ್ಪಕಾಲಿಕ ತರಬೇತಿಗಳು , ಕಾರ್ಯಗಾರಗಳು , ಮುಂತಾದವುಗಳನ್ನು ಕಾಲಕಾಲಕ್ಕೆ ಏರ್ಪಡಿಸಿ ಅಧಿಕಾರಿಗಳ ದಕ್ಷತೆ ಹೆಚ್ಚಿಸಲು ಮತ್ತು ಜ್ಞಾನಾಭಿವೃದ್ಧಿಗೆ ಸತತವಾಗಿ ಶ್ರಮಿಸಲಾಗುತ್ತಿದೆ.


ಆಡಳಿತ ತರಬೇತಿ ಸಂಸ್ಥೆಗೆ ಐ. ಎ.ಎಸ್ ವೃಂದದ ಅಪರ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮಹಾ ನಿರ್ದೇಶಕಾರಾಗಿದ್ದು , ಇಲಾಖಾ ಮುಖ್ಯಸ್ಥರಾಗಿದ್ದಾರೆ. ಈ ಸಂಸ್ಥೆಯ ಅಧೀನದಲ್ಲಿ 29 ಜಿಲ್ಲಾ ತರಬೇತಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಈ ಸಂಸ್ಥೆಗಳು ಆಯಾ ಜಿಲ್ಲೆಯಾ 'ಸಿ' ಮತ್ತು 'ಡಿ' ವೃಂದದ ನಾಕರರಿಗೆ ತರಬೇತಿಯನ್ನು ನೀಡಲಾಗುತ್ತಿದೆ .

Induction Training Programme -Abstract

Induction Training Programme - Monitoring Team

Induction Training Programme - Bangalore (Rural)

Induction Training Programme - Belgaum

Induction Training Programme - Chitradurga

Induction Training Programme - Kalaburugi (Gulbarga)

Induction Training Programme - Mangalore

Induction Training Programme - Mysuru

Induction Training Programme - Sirsi